ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಧ್ಯಂತರ ಚುನಾವಣೆ ಸೂಕ್ತ: ಶಾಮನೂರು ಶಿವಶಂಕರಪ್ಪ (Shivshankarappa | Election | Kpcc | BJP | JDS | Yeddyurappa)
Bookmark and Share Feedback Print
 
ಪ್ರಸ್ತುತ ರಾಜಕೀಯ ವಿದ್ಯಮಾನ ಗಮನಿಸಿದರೆ ಮಧ್ಯಂತರ ಚುನಾವಣೆಯೊಂದೇ ಸೂಕ್ತ ಮಾರ್ಗ ಎಂದು ಕೆಪಿಸಿಸಿ ಖಜಾಂಚಿ ,ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಬಾಪೂಜಿ ಸಭಾಂಗಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಬಿಜೆಪಿ ಸರಕಾರದ ಆಡಳಿತ ವೈಖರಿ ನೋಡಿ ಜನ ರೋಸಿ ಹೋಗಿದ್ದಾರೆ. ದಿನಕ್ಕೊಂದು ಹಗರಣ ಹೊರಗೆ ಬರುತ್ತಿವೆ. ರಾಜಕೀಯ ವ್ಯವಸ್ಥೆ ಇಷ್ಟೊಂದು ಕಲುಷಿತವಾದರೆ ಜನ ಹೇಗೆ ಸಹಿಸಿಯಾರು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯನ್ನು ಬದಲಿಸಿ ಮತ್ತೆ ಬಿಜೆಪಿ ಸರಕಾರ ಮುಂದುವರಿಸುವುದು ಸಮಸ್ಯೆಗೆ ಪರಿಹಾರವಲ್ಲ. ಹೊಸದಾಗಿ ಜನಾದೇಶ ಪಡೆಯುವುದೇ ಸೂಕ್ತ ಎಂದು ಪುನರುಚ್ಚರಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲಿ, ಬಿಡಲಿ, ಅದರಿಂದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವೇನೂ ಬೀರದು ಎಂದರು.

ಯಡಿಯೂರಪ್ಪ ಅಧಿಕಾರದಲ್ಲಿದ್ದರೆ ಕಾಂಗ್ರೆಸ್‌ಗೆ ಕಷ್ಟ. ಅಧಿಕಾರ ತ್ಯಜಿಸಿದರೆ ಲಾಭ ಎಂಬ ವಾದವನ್ನು ನಾನಂತೂ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ರಾಜಕೀಯ ಇತಿಹಾಸವಿದೆ ಎಂಬುದನ್ನು ಮರೆಯಬಾರದು. ಇದು ಬೇರು ಮಟ್ಟದಿಂದ ಬೆಳೆದು ಬಂದ ಪಕ್ಷ. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ