ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಚ್‌ಡಿಕೆ ಮೇಲೂ ಆರೋಪ: 850 ಕೋಟಿ ಭೂಮಿ ಮಂಜೂರು (HD Kumaraswamy | Yaddyurappa | Land Scam | Karnataka | KIADB)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಅಕ್ರಮ ಜಮೀನು ಮಂಜೂರಾತಿ ಕುರಿತಾಗಿ ಹಗರಣಗಳ ಮೇಲೆ ಹಗರಣಗಳ ಆರೋಪ ಸುರಿಯುತ್ತಿದ್ದ ಜೆಡಿಎಸ್, ಇದೀಗ ಅಂಥದ್ದೇ ಸುಳಿಯಲ್ಲಿ ಸಿಲುಕಿಕೊಳ್ಳುವ ಮೂಲಕ ಆಡಳಿತ ಪಕ್ಷಕ್ಕೆ ವಾಗ್ದಾಳಿ ನಡೆಸಲು ಆಯುಧ ಎತ್ತಿ ಕೊಟ್ಟಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಯಡಿಯೂರಪ್ಪ ಮೇಲೆ ಸ್ವಜನ ಪಕ್ಷಪಾತ ಆರೋಪ ಮಾಡುತ್ತಿದ್ದ ಜೆಡಿಎಸ್ ನಾಯಕ, ಸಂಸತ್ಸದಸ್ಯ ಎಚ್.ಡಿ.ಕುಮಾರಸ್ವಾಮಿ, 2007ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ, ಸರ್ಜಾಪುರ ಹೊರ ವರ್ತುಲ ರಸ್ತೆಯಲ್ಲಿ 28 ಎಕರೆ ಕೆಐಎಡಿಬಿಗೆ ಸೇರಿದ್ದ ಜಮೀನನ್ನು ಕೇವಲ 14 ಕೋಟಿ ರೂಪಾಯಿಗೆ ಕೊಡಿಸಿದ್ದಾರೆ ಎಂಬ ಆರೋಪಗಳು ವರದಿಯಾಗಿವೆ. ಅದರ ಮಾರುಕಟ್ಟೆ ಬೆಲೆ 850 ಕೋಟಿ ರೂಪಾಯಿ.

ಇವನ್ನೂ ಓದಿ:
ಡೀನೋಟಿಫೈ ಮಾಡಿದ್ದಕ್ಕೆ ಅನಿತಾ ಕುಮಾರಸ್ವಾಮಿಗೆ ಉಡುಗೊರೆ?
ದ.ಕ. ಜಿಲ್ಲೆಯಲ್ಲಿ ರಾಧಿಕಾ ಹೆಸರಿನಲ್ಲಿ ಕುಮಾರಸ್ವಾಮಿ ಆಸ್ತಿ: ಬಿಜೆಪಿ

ಎರಡು ತಿಂಗಳ ಬಳಿಕ, ಕುಮಾರಸ್ವಾಮಿಯ ಸಹೋದರ ಮತ್ತು ಕುಟುಂಬದ ಇತರ ಸದಸ್ಯರು ಈ ಜಮೀನಿನ ಭಾಗವನ್ನು ಅತ್ಯಲ್ಪ ಬೆಲೆಗೆ ಪಡೆದುಕೊಂಡರು. ಈ ಸ್ಥಳದಲ್ಲಿ ಈಗ ಕಂಪನಿಯೊಂದು ಕಾರ್ಯಾಚರಿಸುತ್ತಿದೆ ಎಂದು ದಾಖಲೆ ಸಹಿತ ಡೆಕ್ಕನ್ ಕ್ರೋನಿಕಲ್ ಪತ್ರಿಕೆ ವರದಿ ಮಾಡಿದೆ.

ಈ ಜಮೀನಿನ ವ್ಯವಹಾರದಲ್ಲಿ ಲಾಭವಾಗಿದ್ದು ಎಚ್‌ಡಿಕೆ ಸೋದರ ಎಚ್.ಡಿ.ಬಾಲಕೃಷ್ಣ ಗೌಡ ಮತ್ತು ಇತರ ಬಂಧುಗಳಿಗೆ. 25 ಸಾವಿರ ಚದರಡಿ ಪ್ರದೇಶವನ್ನು ಅವರು 3.08 ಕೋಟಿ ರೂ.ಗೆ ಪಡೆದುಕೊಂಡಿದ್ದರು. ಅಂದರೆ, ಅದರ ಮಾರುಕಟ್ಟೆ ಬೆಲೆ ಚದರಡಿಗೆ 4000 ಇದ್ದರೂ, ಅವರಿಗೆ ದಕ್ಕಿದ್ದು ಚದರಡಿಗೆ ಕೇವಲ 1200 ರೂಪಾಯಿ ಬೆಲೆಯಲ್ಲಿ. ಬಾಲಕೃಷ್ಣ ಗೌಡರಲ್ಲದೆ, ಅವರ ಪತ್ನಿ, ಪತ್ನಿಯ ಸಹೋದರ ಮತ್ತು ಪತ್ನಿಗೆ ಆಪ್ತರಾಗಿದ್ದ ಮತ್ತೊಬ್ಬರಿಗೂ ಜಮೀನು ಕಡಿಮೆ ಬೆಲೆಯಲ್ಲಿ ದೊರೆತಿದೆ ಎಂದು ವರದಿ ಹೇಳಿದೆ.

2002ರಲ್ಲಿ ಇದೇ ಭೂಮಿಯಲ್ಲಿ ಕೇಂದ್ರ ಸರಕಾರದ ಅಗತ್ಯ ಅನುಮತಿಯೊಂದಿಗೆ ಪ್ರಿಮಾಲ್ ಪ್ರಾಜೆಕ್ಸ್ಟ್ ಕಂಪನಿಯ ಆಡಳಿತ ನಿರ್ದೇಶಕ ಕುಪೇಂದ್ರ ರೆಡ್ಡಿ ಎಂಬವರು ಐಟಿ ಪಾರ್ಕ್ ಅಭಿವೃದ್ಧಿಪಡಿಸಿದ್ದರು. ಇಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಅವರಿಗೆ 28 ಎಕರೆ ಜಮೀನನ್ನು 2003ರಲ್ಲಿ ಕೆಐಎಡಿಬಿ ಲೀಸ್ ಆಧಾರದಲ್ಲಿ ನೀಡಿತ್ತು. ನಾಲ್ಕು ವರ್ಷಗಳಲ್ಲಿ, ಅಂದರೆ 2007ರಲ್ಲಿ, ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿಯಾದ ಅವರು, ಅಬಾಧಿತ ವಿಕ್ರಯ ಪತ್ರ (ಅಬ್ಸೊಲ್ಯೂಟ್ ಸೇಲ್ ಡೀಡ್) ಮಾಡಿಸುವಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಕಚೇರಿಯಿಂದ ಫೈಲ್ ಪಾಸ್ ಆದ ತಕ್ಷಣವೇ ಅವರಿಗೆ ವಿಕ್ರಯ ಪತ್ರವೂ ದೊರೆಯಿತು

ಸಾಮಾನ್ಯವಾಗಿ, ಕೆಐಎಡಿಬಿ ನಿಯಮಾವಳಿಗಳ ಪ್ರಕಾರ, ವಿಕ್ರಯ ಪತ್ರಕ್ಕೆ ಕನಿಷ್ಠ 8 ವರ್ಷಗಳು ಬೇಕು. ಅದಕ್ಕೂ ಹೆಚ್ಚಾಗಿ, ಕಂಪನಿಯು ಕೈಗಾರಿಕೆ ಸ್ಥಾಪಿಸಲು ಸಮರ್ಥ ಎಂಬುದನ್ನು ಸಾಬೀತುಪಡಿಸಿದರೆ ಮಾತ್ರವೇ ವಿಕ್ರಯಪತ್ರ ನೀಡಬಹುದಾಗಿದೆ.

ವಿಕ್ರಯಪತ್ರ ಮಂಜೂರಾದ ಎರಡೇ ತಿಂಗಳಲ್ಲಿ ಕುಪೇಂದ್ರ ರೆಡ್ಡಿ ಅವರು ಐಟಿ ಪಾರ್ಕ್‌ನ ಒಂದಷ್ಟು ಭಾಗವನ್ನು ಎಚ್‌ಡಿಕೆ ಕುಟುಂಬಕ್ಕೆ ಮಾರಾಟ ಮಾಡಿದ್ದಾರೆ. ಸಹೋದರ ಬಾಲಕೃಷ್ಣ ಗೌಡರಿಗೆ 25000 ಚದರಡಿ ದೊರೆತರೆ, ಅವರ ಪತ್ನಿ ಕವಿತಾಗೆ 5000 ಚದರಡಿ, ಕವಿತಾರ ಸಹೋದರ ರವೀಂದ್ರ ಮತ್ತು ಆಕೆಯ ಆಪ್ತ ಸಂಬಂಧಿಕಳಾದ ನಿರ್ಮಲಾ ಎಂಬವರಿಗೂ ತಲಾ 5000 ಚದರಡಿ ಪಡೆದಿದ್ದಾರೆ ಎಂದು ವರದಿ ಹೇಳಿದೆ. ಬಾಲಕೃಷ್ಣ ಗೌಡರು ಜಮೀನನ್ನು 3.08 ಕೋಟಿ ರೂ.ಗೆ ನೋಂದಾವಣೆ ಮಾಡಿಕೊಂಡಿದ್ದರೆ, ಉಳಿದ ಮೂವರು ತಮ್ಮ ಪಾಲನ್ನು ತಲಾ 60 ಲಕ್ಷ ರೂ.ಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ