ರಾಜ್ಯದಲ್ಲಿ ವೀರಶೈವರು ಮುಖ್ಯಮಂತ್ರಿ ಆದ ಸಂದರ್ಭಗಳಲ್ಲಿ ಇಂತಹ ಆರೋಪಗಳು ಕೇಳಿ ಬಂದಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಬಿಟಿಎಂ ಬಡಾವಣೆಯಲ್ಲಿ ಶುಕ್ರವಾರ ವೇದಂ ಆಯುರ್ವೇದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕಾರಣಿಗಳು ಯಾವುದೇ ಪಕ್ಷದಲ್ಲಿದ್ದ ಅವರಿಗೆ ಮುಂದಾಲೋಚನೆ ಇರಬೇಕು ಎಂದರು.
ಸರಕಾರಿ ಪಡಿತರ ಆಹಾರ ಧಾನ್ಯಗಳು ಬಡವರಿಗೆ ಸಿಗಬೇಕು. ಅದು ಶ್ರೀಮಂತರ ಪಾಲಾಗಲು ಬಿಡುವುದಿಲ್ಲ ಎಂದು ಸೋಮಣ್ಣ ಈ ಸಂದರ್ಭದಲ್ಲಿ ಹೇಳಿದರು. ಪಡಿತರ ಆಹಾರ ಧಾನ್ಯಗಳು ಬಡವರಿಗೆ ಸಿಗದೆ ಇರುವಂತಹ ಪರಿಸ್ಥಿತಿಯನ್ನು ತಡೆಯಲು ರಾಜ್ಯಾದ್ಯಂತ ದಾಳಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದುವರೆಗೆ 40 ಕಡೆ ದಾಳಿ ಮಾಡಿ ಐದು ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದರು.