ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಾಲ ತೀರಿಸಲು ಯಡಿಯೂರಪ್ಪ ಕಾಲು ಹಿಡಿದಿದ್ರು: ಎಚ್‌ಡಿಕೆ (BJP | JDS | Yeddyurappa | Kumaraswamy | Deve gowda | Land scam)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೌಡರ ಕುಟುಂಬದ ನಡುವಿನ ಜಂಗೀಕುಸ್ತಿ ಮುಂದುವರಿದಿದ್ದು, 2005ರಲ್ಲಿ ಯಡಿಯೂರಪ್ಪ ಸದಾಶಿವನಗರದಲ್ಲಿರುವ ತಮ್ಮ ಗೆಸ್ಟ್ ಹೌಸ್‌ನ ಹಿಂಬಾಗಿಲಿನಿಂದ ಬಂದು ತಾನು ಅನಂತ್ ಕುಮಾರ್ ಅವರಿಂದ ಐದು ಕೋಟಿ ಸಾಲ ಪಡೆದಿದ್ದೇನೆ. ಅದಕ್ಕೆ ಸಹಾಯ ಮಾಡಿ ನನ್ನ ಮಂತ್ರಿ ಮಾಡಿ ಸಾಕು. ಬಿಜೆಪಿ ತೊರೆದು ಜೆಡಿಎಸ್ ಸೇರುತ್ತೇನೆ ಎಂದು ನನ್ನ ಕಾಲು ಹಿಡಿದು ಭಿಕ್ಷೆ ಬೇಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಎಂದಿಗೂ ನಿಮ್ಮ ಮುಂದೆ ಬಂದು ಭಿಕ್ಷೆ ಬೇಡಿಲ್ಲ, ಇನ್ನು ಮುಂದೆಯೂ ಬೇಡಲ್ಲ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಪದೇ, ಪದೇ ದೇವೇಗೌಡರ ಹೆಸರು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ದೇವೇಗೌಡರ ಉಗುರಿಗೂ ಸರಿ ಸಮಾನರಲ್ಲ. ದೇವೇಗೌಡರ ರಾಜಕಾರಣ ಎಲ್ಲಿ, ಇವರ ರಾಜಕಾರಣವೆಲ್ಲಿ. ಗೌಡರು ಮೊದಲಿನಿಂದಲೂ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಲೇ ಬಂದವರು ಇದು ನೆನಪಿರಲಿ ಎಂದು ಎಚ್ಚರಿಸಿದರು.

ಸುಳ್ಳು ಮಾಹಿತಿಯ ಜಾಹೀರಾತು ನಿಡ್ಬೇಡಿ:
ಯಡಿಯೂರಪ್ಪ ಅವರು ಸುಳ್ಳು ಮಾಹಿತಿಗಳನ್ನೊಳಗೊಂಡ ಜಾಹೀರಾತುಗಳ ಮೂಲಕ ದೇವೇಗೌಡರು ಮತ್ತು ಮಕ್ಕಳನ್ನು ಹೆದರಿಸಬಹುದು ಎಂದು ತಿಳಿದುಕೊಂಡಿದ್ದರೆ ಅದು ಕೇವಲ ಭ್ರಮೆ ಆಗಲಿದೆ ಎಂದ ಕುಮಾರಸ್ವಾಮಿ, ನಾವು ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದರು.

ನಕಲಿ ದಾಖಲೆಗಳನ್ನೊಳಗೊಂಡ ಜಾಹೀರಾತುಗಳನ್ನು ನೀಡಿ ನಗೆಪಾಟಿಲಿಗೀಡಾಗಬೇಡಿ. ನಮ್ಮ ಕುಟುಂಬದ ಆಸ್ತಿ ಮತ್ತಿತರ ವಿವರಗಳನ್ನೊಳಗೊಂಡ ದಾಖಲೆಗಳು ಬೇಕಿದ್ದರೆ ನಾವೇ ಕೊಡುತ್ತೇವೆ. ಅಧಿಕಾರಿಗಳಿಗೆ ಕಷ್ಟ ಕೊಡಬೇಡಿ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪನವರೇ ನನ್ನ ಮೇಲೆ ಕೆಸರೆರಚಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾವು ನಿಮ್ಮ ವಿರುದ್ಧ ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಮಾಡಿರುವುದು ವಿರೋಧ ಪಕ್ಷದ ನಾಯಕನಾಗಿಯೇ ಹೊರತು, ಸೇಡಿನ ರಾಜಕಾರಣದಿಂದಲ್ಲ. ಆದರೆ ನೀವು, ಸೇಡಿನ ರಾಜಕಾರಣ ಮಾಡುವುದಕ್ಕೆ ಹೋಗಿ ನಗೆಪಾಟಿಲಿಗೀಡಾಗುತ್ತೀರಿ ಎಂದರು.

ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ:
ತಾವು ಮುಖ್ಯಮಂತ್ರಿಯಾಗಿದ್ದಾಗ 2006-07ರಲ್ಲಿ ಮೈಸೂರಿನಲ್ಲಿ ನಿವೇಶನ ಹಾಗೂ ಜಮೀನನ್ನು ಸಂಬಂಧಿಕರಿಗೆ ಮಂಜೂರು ಮಾಡಿರುವುದಾಗಿ ಯಡಿಯೂರಪ್ಪನವರು ಆರೋಪಿಸಿರುವುದಕ್ಕೆ ಸಂಬಂಧಿಸಿದಂತೆ ಒಂದೆರಡು ಪತ್ರಿಕೆಗಳಲ್ಲಿ ಶನಿವಾರ ಜಾಹೀರಾತು ನೀಡಲಾಗಿದೆ. ಆದರೆ ಆ ಜಾಹೀರಾತುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ 1984ರಲ್ಲಿ ನನಗೊಂದು ನಿವೇಶನ ಮಂಜೂರಾಗಿದೆ. ಅದಕ್ಕೆ 1986ರಲ್ಲಿ 33ಸಾವಿರ ರೂ.ಕಟ್ಟಿದ್ದೇನೆ. ಆಗ ನಾನು ಮೈಸೂರು ಪ್ರಾಂತ್ಯದ ಚಲನಚಿತ್ರ ವಿತರಕನಾಗಿದ್ದೆ. ರಾಜಕಾರಣಕ್ಕೆ ಬಂದಿರಲಿಲ್ಲ ಎಂದರು.

ಆದರೆ 1984ರಲ್ಲಿ ನಿವೇಶನ ಮಂಜೂರಾಗಿರುವುದನ್ನು ನಾನು ಮುಖ್ಯಮಂತ್ರಿಯಾದಾಗ ಮಂಜೂರಾಗಿದೆ ಎಂದು ಸುಳ್ಳು ಜಾಹೀರಾತು ನೀಡಲಾಗಿದೆ. ಅಲ್ಲದೇ ಬೇನಾಮಿ ಹೆಸರಿನಲ್ಲಿ ಆಸ್ತಿಗಳಿರುವುದಾಗಿಯೂ ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ 24 ಗಂಟೆಯೊಳಗೆ ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ