ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾವು ಆಕ್ರಮ ಎಸಗಿರಿವುದು ಬಹಿರಂಗಪಡಿಸಿದಲ್ಲಿ ರಾಜಕೀಯ ಜೀವನದಿಂದ ನಿವೃತ್ತಿಯಾಗುವುದಾಗಿ ಎಚ್.ಡಿ.ಕುಮಾರ ಸ್ವಾಮಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸವಾಲು ಹಾಕಿದ್ದಾರೆ.
ವಿಶೇಷ ಆರ್ಥಿಕ ವಲಯ ಸೇರಿದಂತೆ ಯಾವುದೇ ನಿರ್ಧಾರವನ್ನು ಕಾನೂನುಬಾಹಿರವಾಗಿ ತೆಗೆದುಕೊಂಡಿರುವುದು ಸಾಬೀತುಪಡಿಸಲಿ.ಸಿಐಡಿ, ಸಿಬಿಐ ಸೇರಿದಂತೆ ಯಾವುದೇ ರೀತಿಯ ತನಿಖೆಗೆ ಸಿದ್ಧ ಎಂದು ಘೋಷಿಸಿದ್ದಾರೆ.
ಮಾಜಿ ಪ್ರದಾನಿ ದೇವೇಗೌಡರು ಮತ್ತು ಅವರ ಕುಟುಂಬದ ಬಗ್ಗೆ ಎಂತಹ ತನಿಖೆ ಬೇಕಾದರೂ ನಡೆಸಲಿ.ತನಿಖೆಗೆ ಸಿದ್ಧ ಎಂದು ಸರಕಾರಕ್ಕೆ ಸವಾಲು ಹಾಕಿದ್ದಾರೆ. ಲೋಕಾಯುಕ್ತರ ಬಗ್ಗೆ ಬಿಜೆಪಿ ,ಸರಕಾರ ಮತ್ತು ಶಾಸಕರು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಲೋಕಾಯುಕ್ತ ಕಚೇರಿಯ ಮುಂದೆ ಧರಣಿ ನಡೆಸುವ ಬೆದರಿಕೆ ಹಾಕುತ್ತಿದ್ದಾರೆ ಸಂವಿಧಾನಿಕ ಸಂಸ್ಥೆಯ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಸರಕಾರಕ್ಕೆ ನಾಚಿಕೆ ಮಾನ ಮರ್ಯಾದೆಯಿಲ್ಲ ಎಂದು ಕಿಡಿಕಾರಿದರು.
ದೇವೇಗೌಡರು ಮತ್ತು ಅವರ ಕುಟುಂಬದವರ ಆಸ್ತಿಯ ತನಿಖೆ ನಡೆಸಲು ರಿಜಿಸ್ಟಾರ್ ಕಚೇರಿಯ ಅಧಿಕಾರಿಗಳನ್ನು ಹಗಲಿರಳು ದುಡಿಯುವಂತೆ ಆದೇಶಿಸಿದ್ದಾರೆ ಎಂದು ಎಚ್.ಡಿ.ಕುಮಾರ ಸ್ವಾಮಿ ವ್ಯಂಗವಾಡಿದರು.