ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ಕಾಟ್ಲೆಂಡ್‌ಯಾರ್ಡ್‌ನಿಂದ ಬೇಕಿದ್ರೂ ತನಿಖೆ ಮಾಡ್ಸಿ: ಸಿಎಂಗೆ ಗೌಡ (Scotland Yard Police | Upper Krishna Irrigation Project | Devegowda | Scam)
ಸ್ಕಾಟ್ಲೆಂಡ್‌ಯಾರ್ಡ್‌ನಿಂದ ಬೇಕಿದ್ರೂ ತನಿಖೆ ಮಾಡ್ಸಿ: ಸಿಎಂಗೆ ಗೌಡ
ಹಾಸನ, ಮಂಗಳವಾರ, 30 ನವೆಂಬರ್ 2010( 09:38 IST )
NRB
ತನ್ನ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸಿಬಿಐ ತನಿಖೆ ನಡೆಸುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಬಿಐಯೇನು, ಬೇಕಿದ್ದರೆ ಯಡಿಯೂರಪ್ಪ ಅವರು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿಂದಲೂ ತನಿಖೆ ನಡೆಸಲಿ, ನಾನು ಹೆದರುವವನಲ್ಲ ಎಂದಿದ್ದಾರೆ.
ಸಿಎಂ ಹೇಳಿಕೆಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ಬೇಕಿದ್ದರೆ ಸ್ಕಾಟ್ಲೆಂಡ್ ಯಾರ್ಡ್ (ತನಿಖೆಗೆ ಹೆಸರುವಾಸಿಯಾದ ಇಂಗ್ಲೆಂಡ್ ತನಿಖಾ ಪಡೆ) ಪೊಲೀಸರಿಂದಲೂ ತನಿಖೆ ಮಾಡಿಸಲಿ, ನಾನೇನೂ ಈ ಬೆದರಿಕೆಗಳಿಗೆ ಹೆದರಿ ಓಡಿಹೋಗುವವನಲ್ಲ ಎಂದರು.
ಗೌಡರು ಮುಖ್ಯಮಂತ್ರಿಯಾಗಿದ್ದ 90ರ ದಶಕದ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸಿಬಿಐ ತನಿಖೆ ನಡೆಸುವುದಾಗಿ ಶನಿವಾರ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. ಇದೀಗ ಸೋಮವಾರ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಈ ಅವ್ಯವಹಾರಗಳ ತನಿಖೆಯನ್ನು ಸಿಒಡಿಗೆ ಒಪ್ಪಿಸಲಾಗಿದೆ.