ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುಂದಾಪುರ; ಕುಖ್ಯಾತ ನಕ್ಸಲ್ ಶೇಖರ್ ಬಂಧನ (Naxal | Shekar | Tamil nady | BG krishana Murthy | Yadamoge)
Bookmark and Share Feedback Print
 
ಕುಂದಾಪುರ ತಾಲೂಕಿನ ಯಡಮೊಗೆ ಬಸವನಪಾಲು ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಕುಖ್ಯಾತ ನಕ್ಸಲ್ ಶೇಖರ್ ಅಲಿಯಾಸ್ ರಂಜಿತ್ ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡು ಮೂಲದ ಶೇಖರ್ ಎಂಬಾತನನ್ನು ಬುಧವಾರ ಸಂಜೆ ಬಂಧಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿ ಅಲೋಕ್ ಮೋಹನ್ ತಿಳಿಸಿದ್ದು, ಆತ ಪಶ್ಚಿಮಘಟ್ಟದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಕ್ಸಲೀಯರಿಗೆ ಔಷಧೋಪಚಾರ ಮಾಡಲು ಆಗಮಿಸಿದ್ದ ಎಂದು ವಿವರಿಸಿದ್ದಾರೆ.

ಶೇಖರ್ ನಕ್ಸಲ್ ಮುಖಂಡ ಬಿ.ಜಿ.ಕೃಷ್ಣಮೂರ್ತಿಯ ಸಹಚರ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಪಶ್ಚಿಮಘಟ್ಟದಲ್ಲಿ ಹಲವು ನಕ್ಸಲೀಯರು ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ, ಆಯುರ್ವೇದ ಮತ್ತು ಹೋಮಿಯೋಪತಿ ಪರಿಣತನಾಗಿದ್ದ ಶೇಖರನನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳಲಾಗಿತ್ತು.

ಬಂಧಿತ ಶೇಖರ್‌ನಿಂದ ಜಿಲೆಟಿನ್ ಕಡ್ಡಿ, ಡಿಟೋನೇಟರ್, ನಕ್ಸಲ್ ಸಂಬಂಧಿ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಲೋಕ್ ತಿಳಿಸಿದ್ದಾರೆ. ಶೇಖರ್ ವಿರುದ್ದ ತಮಿಳುನಾಡಿನಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಆತನ ತಲೆಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ತಮಿಳುನಾಡು ಸರಕಾರ ಘೋಷಿಸಿತ್ತು ಎಂದು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ