ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸದನದಲ್ಲಿ 'ಗಣಿ ರಂಪಾಟ'; ತನಿಖೆಗೆ ಸಮಿತಿ ರಚನೆ (BJP | Congress | Yeddyurappa | Siddaramaiah | Bopayya | Janardana Reddy)
Bookmark and Share Feedback Print
 
ಕಳೆದ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ನಡೆದ ಗಣಿ ಗದ್ದಲದ ವಿಚಾರಣೆಗೆ ಸಂಬಂಧಿಸಿದಂತೆ ಐವರು ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. ಈ ಕುರಿತು ಗುರುವಾರ ಸ್ಪೀಕರ್ ಕೆ.ಜಿ.ಬೋಪಯ್ಯ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಸದಸ್ಯ ಶ್ರೀಕಾಂತ್ ಕುಲಕರ್ಣಿ ನೇತೃತ್ವದ ಈ ಸಮಿತಿಯಲ್ಲಿ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಜೆಡಿಎಸ್‌ನ ಎಸ್.ಕೆ.ಬಸವರಾಜನ್ ಹಾಗೂ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ. ಎಸ್.ಆರ್.ವಿಶ್ವನಾಥ್ ಸದಸ್ಯರಾಗಿದ್ದಾರೆ.

ಕಳೆದ ಜುಲೈನಲ್ಲಿ ನಡೆದ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೊಡೆತಟ್ಟಿದ್ದರೆ, ಬಿಜೆಪಿ ಶಾಸಕ ಸುರೇಶ್ ಬಾಬು ಮಾರಾಮಾರಿಗೆ ಮುಂದಾದ ಪ್ರಸಂಗ ನಡೆದಿತ್ತು. ಅಲ್ಲದೇ ಅಸಂಸದೀಯ ಪದಗಳ ಬಳಕೆಯಿಂದ ಸದನ ರಣರಂಗವಾಗಿತ್ತು.

ಅಕ್ರಮ ಗಣಿಗಾರಿಕೆ ಕುರಿತಂತೆ ಸದನದಲ್ಲಿ ನಡೆದ ಸುದೀರ್ಘ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ನೀಡುತ್ತಿದ್ದ ವೇಳೆ ಸಚಿವ ಜನಾರ್ದನ ರೆಡ್ಡಿ ಅವರು ಮಧ್ಯೆ ಮಾತನಾಡಲು ಮುಂದಾದರು. ಇದಕ್ಕೆ ಯಡಿಯೂರಪ್ಪ ಅವರೂ ಅನುವು ಮಾಡಿಕೊಡಲು ಸಿದ್ದರಾದಾಗ ಪ್ರತಿಪಕ್ಷಗಳು ಆಕ್ಷೇಪ ಎತ್ತಿದ್ದವು.

ಈ ಹಂತದಲ್ಲಿ ಬಳ್ಳಾರಿ ಬಿಜೆಪಿ ಶಾಸಕ ಸುರೇಶ್ ಬಾಬು, ನಾಗೇಂದ್ರ, ಸೋಮಶೇಖರ ರೆಡ್ಡಿ, ಜನಾರ್ದನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಏಕಾಏಕಿ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿರುವುದು ರಾದ್ದಾಂತಕ್ಕೆ ಕಾರಣವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ