ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಮ್ಮ ರಾಜಕಾರಣಿಗಳು ತರ್ಲೆ;ಮೋದಿ ಮಾದರಿಯಾಗ್ಬೇಕು:ಭೈರಪ್ಪ (Modi | Karnataka | SL Bairappa | Mysore | Yeddyurappa)
Bookmark and Share Feedback Print
 
ರಾಜ್ಯದಲ್ಲಿನ ರಾಜಕಾರಣಿಗಳು ಒಂದಲ್ಲ ಒಂದು ರೀತಿ ತರ್ಲೆಗಳಂತೆ ವರ್ತಿಸುತ್ತಿದ್ದಾರೆ ಎಂದು ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಟೀಕಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕುವೆಂಪು ನಗರದಲ್ಲಿ ಆಸರೆ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ 2011ನೇ ಸಾಲಿನ ದಿನಚರಿ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯ ತನಕ ಆಡಳಿತ ನಡೆಸಿದ ಎಲ್ಲಾ ಸರಕಾರಗಳಲ್ಲಿಯೂ ಹಗರಣಗಳಿವೆ. ಅದರಲ್ಲಿ ಕೆಲವು ಹೊರ ಬಂದರೆ ಇನ್ನು ಕೆಲವು ಮುಚ್ಚಿ ಹೋಗಿವೆ. ಅವುಗಳನ್ನು ಕೆದಕುತ್ತಾ ಹೋದರೆ ಪರಿಸ್ಥಿತಿ ಜಟಿಲವಾಗಿ ವಿವಾದಗಳು ಸೃಷ್ಟಿಯಾಗುತ್ತದೆ. ಆದ್ದರಿಂದ ಇದನ್ನು ಬದಿಗೊತ್ತಿ ಅಭಿವೃದ್ಧಿ ಕಡೆ ಗಮನಹರಿಸುವುದು ಲೇಸು ಎಂದರು.

ಕರ್ನಾಟಕದ ರಾಜಕಾರಣಿಗಳು ಅಭಿವೃದ್ಧಿ ಮಾಡುವ ವಿಚಾರದಲ್ಲಿ ಯಾರಿಗೂ ಸಹಕಾರ ನೀಡುವುದಿಲ್ಲ. ಇದಕ್ಕೆ ಅವರ ಮನಸ್ಥಿತಿಯೇ ಕಾರಣ. ಕೇವಲ ತರ್ಲೆ ಮಾಡುತ್ತ ಒಬ್ಬರಿಗೊಬ್ಬರು ಕಾಲೆಳೆಯುತ್ತಲೇ ಕಾಲಹರಣ ಮಾಡುತ್ತಾರೆ. ನಿಜಕ್ಕೂ ಮೋದಿ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗಬೇಕಿತ್ತು. ಆದರೆ ಹಾಗೇ ಆಗಲೇ ಇಲ್ಲ. ಕಾರಣ ನಮ್ಮ ಮುಖಂಡರು ಮೋದಿಯಂತಹ ರಾಜಕಾರಣಿಗಳಲ್ಲ ಎಂದು ವ್ಯಂಗ್ಯವಾಡಿದರು.

ಇಂದು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟದಿಂದ ಜನರು ಬೇಸತ್ತಿದ್ದಾರೆ. ಚುನಾವಣೆ ವೇಳೆ ಜನರಿಗೆ ಇಲ್ಲ-ಸಲ್ಲದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ನಂತರ ಜನರ ಆಶೋತ್ತರಗಳಿಗೆ ಸ್ಪಂದಿಸದೆ ಹಣ ಹಾಗೂ ಭ್ರಷ್ಟಚಾರ ಎಸಗುವುದರಲ್ಲಿಯೇ ತೊಡಗುತ್ತಾರೆ ಎಂದು ಆರೋಪಿಸಿದರು.

ಆ ನಿಟ್ಟಿನಲ್ಲಿ ಪ್ರಜ್ಞಾವಂತರಾದ ಮತದಾರರ ಮನಸ್ಥಿತಿ ಬದಲಾಗಬೇಕಿದೆ. ಅವರು ಚುನಾವಣೆ ವೇಳೆ ಯಾವುದೇ ಆಮಿಷಗಳಿಗೆ ಬಲಿಯಾಗದೆ, ಸಚ್ಚಾರಿತ್ರ್ಯ ವ್ಯಕ್ತಿಗಳನ್ನು ಚುನಾಯಿಸಿ ಕಳುಹಿಸಿದರೆ ಈ ರಾಜ್ಯ ಉದ್ಧಾರವಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ