ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೋಕಾಯುಕ್ತ ರಾಜಕಾರಣಿಯಂತೆ ವರ್ತಿಸಬಾರದು: ಈಶ್ವರಪ್ಪ (Lokayutka | N Santosh Hegde | KS Eshwarappa | Land scam)
Bookmark and Share Feedback Print
 
ಆರೋಪಿಗಳನ್ನು ಅಪರಾಧಿಗಳಂತೆ ಮಾಧ್ಯಮಗಳ ಎದುರು ಬಿಂಬಿಸುತ್ತಿದ್ದಾರೆ ಎಂದು ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರ ಬಗ್ಗೆ ಇತ್ತೀಚಿನ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಲೋಕಾಯುಕ್ತರ ಬಗ್ಗೆ ನನಗೆ ಮತ್ತು ಪಕ್ಷಕ್ಕೆ ಅಪಾರ ಗೌರವವಿದೆ. ಆದರೆ ಅವರು ಸಂದೇಹ ಬರುವಂತೆ ನಡೆದುಕೊಳ್ಳಬಾರದು ಎಂದರು.

ಆರೋಪಿಗಳ ವಿರುದ್ಧದ ಕಡತ ಸಿಕ್ಕಿದ ಕೂಡಲೇ ಅವರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ. ಆರೋಪಗಳು ಬಂದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ವರದಿ ನೀಡಲಿ. ಅದು ಬಿಟ್ಟು ಮಾಧ್ಯಮಗಳಿಗೆ ರಾಜಕಾರಣಿಗಳಂತೆ ವಿವರಣೆ ನೀಡಿ, ಡಂಗೂರ ಸಾರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಈಶ್ವರಪ್ಪ, ಹೀಗೆ ಮಾಡುವುದಾದರೆ ನ್ಯಾಯಾಲಯ ಇರುವುದಾದರೂ ಯಾಕೆ ಎಂದರು.

ಹೆಗ್ಡೆಯವರು ಈ ಹಿಂದೆ ರಾಜೀನಾಮೆ ನೀಡಲು ಮುಂದಾದಾಗ ಅವರು ಪ್ರಾಮಾಣಿಕರು ಎಂಬ ಒಂದೇ ಕಾರಣಕ್ಕೆ ಮುಖಂಡರೆಲ್ಲ ಸೇರಿ ಮುಂದುವರಿಯುವಂತೆ ಮನ ಒಲಿಸಿದ್ದೆವು. ಆದರೆ ದುರದೃಷ್ಟವೆಂದರೆ ಲೋಕಾಯುಕ್ತರು, ಕಡತಗಳು ಸಿಕ್ಕಿದ ಕೂಡಲೇ ಆರೋಪಿಯನ್ನು ಅಪರಾಧಿಯೆಂಬಂತೆ ಘೋಷಿಸಿ ಬಿಡುತ್ತಾರೆ ಎಂದು ಬಿಜೆಪಿ ಮುಖಂಡ ವಿಷಾದ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಷ್ಟ ಉದಾಹರಣೆ ನೀಡಿದ್ದು ಕಾಂಗ್ರೆಸ್ ಮುಖಂಡ ಧರಂ ಸಿಂಗ್ ಪ್ರಕರಣವನ್ನು. ಅವರ ವಿರುದ್ಧ ಆರೋಪ ಬಂದರೂ ರಕ್ಷಣೆ ಮಾಡುತ್ತಿರುವುದು ಯಾಕೋ ಎಂದು ಪ್ರಶ್ನಿಸಿದರು.

ಭೂ ಹಗರಣದಲ್ಲಿ ಪಾಲ್ಗೊಂಡಿರುವವರಲ್ಲಿ ದೊಡ್ಡವರಿದ್ದಾರೆ ಎಂದು ಇತ್ತೀಚೆಗಷ್ಟೇ ಲೋಕಾಯುಕ್ತರು ಹೇಳಿರುವುದನ್ನು ನೆನಪಿಸಿದ ಈಶ್ವರಪ್ಪ, ಆ ದೊಡ್ಡವರ ಹೆಸರನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ