ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೋಳ್ವಾಲ್‌ಕರ್ ಮುಸ್ಲಿಮ್ ವಿರೋಧಿ ಆಗಿರಲಿಲ್ಲ: ಅಲಿಖಾನ್ (BJP | RSS | Alikhan | Savarkar | Congress | JDS)
Bookmark and Share Feedback Print
 
ವೀರ ಸಾರ್ವಕರ್ ಹಾಗೂ ಗುರೂಜಿ ಗೋಳ್ವಾಲ್‌ಕರ್ ಮುಸ್ಲಿಮ್ ವಿರೋಧಿಯಾಗಿರಲಿಲ್ಲ. ಆದರೆ ಅವರ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸಲಾಯಿತು ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಸಚಿವ ಡಾ.ಮುಮ್ತಾಜ್ ಅಲಿಖಾನ್ ದೂರಿದ್ದಾರೆ.

ನಗರದಲ್ಲಿ ಮಿಥಿಕ್ ಸೊಸೈಟಿಯು ಭಾನುವಾರ ತಮ್ಮ ಪುತ್ರ, ದಿವಂಗತ ನೂರ್ ಅಹ್ಮದ್ ಅಲಿಖಾನ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಗುರೂಜಿ ಗೋಳ್ವಾಲ್‌ಕರ್ ಅವರ ಅಂತಾರಾಷ್ಟ್ರೀಯ ಚಿಂತನೆಗಳು ಕುರಿತ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.

ಜನರಲ್ಲಿ ಆತ್ಮವಿಶ್ವಾಸ, ಸಹಮತ ಮೂಡದಿದ್ದರೆ ರಾಷ್ಟ್ರವನ್ನು ಸಂಘಟಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅವರು ಮನಗಂಡಿದ್ದರು. ಆ ನಿಟ್ಟಿನಲ್ಲಿ ಅವರ ಪ್ರಯತ್ನ ಅನುಕರಣೀಯ. ಆಧುನಿಕ ಕಾಲದ ಮಹಾನ್ ಚಿಂತಕರಾದ ಅವರನ್ನು ಒಂದು ಕೋಮಿಗೆ ಸೀಮಿತಗೊಳಿಸುವುದು ತಪ್ಪು ಎಂದರು.

ಖಾಕಿ ಹಾಕಿ ದೊಣ್ಣೆ ಹಿಡಿದುಕೊಂಡವರೆಲ್ಲ ಆರ್ಎಸ್ಎಸ್ ಆಗಲಾರರು, ಮುಕ್ತ ಮನಸ್ಸಿನಿಂದ ಎಲ್ಲಾ ಜಾತಿಯ ಜನರನ್ನು ಒಗ್ಗೂಡಿಸಿ ರಾಷ್ಟ್ರೀಯತೆ ಭಾವನೆ ಮೂಡಿಸುವವರೇ ನಿಜವಾದ ಆರ್ಎಸ್‌ಎಸ್ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ