ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಬಚಾವ್ ತಂತ್ರ?:ಭೂ ಹಗರಣ-ಸರಕಾರದಿಂದ ಹೊಸ ಅಧಿಸೂಚನೆ (BJP | Yeddyurappa | Land Scam | Lokayuktha | High court | JDS)
Bookmark and Share Feedback Print
 
ಭೂಹಗರಣದ ತನಿಖೆಯನ್ನು ಯಾರು ನಡೆಸಬೇಕೆಂಬ ವಿವಾದ ಹೈಕೋರ್ಟ್ ಕಟಕಟೆಯಲ್ಲಿರುವಾಗಲೇ, ಕೆಐಎಡಿಬಿ, ಬಿಡಿಎ ಭೂ ಡಿನೋಟಿಫಿಕೇಷನ್ ಹಗರಣವನ್ನು ಲೋಕಾಯುಕ್ತರು ಹಾಗೂ ನವೆಂಬರ್ 18ರ ನಂತರದ ಪ್ರಕರಣವನ್ನು ನ್ಯಾ.ಪದ್ಮರಾಜ್ ಆಯೋಗ ತನಿಖೆ ನಡೆಸಬೇಕೆಂದು ರಾಜ್ಯ ಸರಕಾರ ಸೋಮವಾರ ಅಧಿಸೂಚನೆ ಹೂರಡಿಸಿದೆ.

ಮುಖ್ಯಮಂತ್ರಿ ಬಚಾನ್ ತಂತ್ರ?: ಭೂ ಹಗರಣಕ್ಕೆ ಸಂಬಂಧಿಸಿದಂತೆ ಕಟ್ಟಾ ಕುಟುಂಬದ ವಿರುದ್ಧ ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತಾ ನವೆಂಬರ್ 18ರಂದು ದೂರು ನೀಡಿದ್ದರು. ಅದೇ ರೀತಿ ನವೆಂಬರ್ 20ರಂದು ಮುಖ್ಯಮಂತ್ರಿ ಮತ್ತು ಕುಟುಂಬದವರ ವಿರುದ್ಧ ಜೆಡಿಎಸ್ ದೂರು ನೀಡಿತ್ತು.

ಇದೀಗ ನವೆಂಬರ್ 18ರವರೆಗಿನ ಡಿನೋಟಿಫಿಕೇಶನ್ ಪ್ರಕರಣದ ತನಿಖೆಯನ್ನು ಲೋಕಾಯುಕ್ತರು ನಡೆಸಬೇಕು, ಆ ನಂತರದ ಹಾಗೂ ಉಳಿದ ಪ್ರಕರಣವನ್ನು ನ್ಯಾ.ಪದ್ಮರಾಜ್ ಅವರ ವ್ಯಾಪ್ತಿಗೆ ಬರಲಿದೆ ಎಂದು ರಾಜ್ಯ ಸರಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಭೂ ಹಗರಣ ವಿವಾದ ತಮ್ಮ ಅಧಿಕಾರದ ಗದ್ದುಗೆಗೆ ಉರುಳಾಗಿರುವ ಸಂದರ್ಭದಲ್ಲಿಯೇ ತಾವು ಮತ್ತು ಕುಟುಂಬ ವರ್ಗ ಬಚಾನ್ ಆಗುವ ನಿಟ್ಟಿನಲ್ಲಿ ನವೆಂಬರ್ 18ರವರೆಗಿನ ಪ್ರಕರಣದ ತನಿಖೆ ಲೋಕಾಯುಕ್ತಕ್ಕೆ ಒಪ್ಪಿಸಿದ್ದು, ನ.18ರ ನಂತರ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನ್ಯಾ.ಪದ್ಮರಾಜ್ ಅವರಿಗೆ ಒಪ್ಪಿಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಏತನ್ಮಧ್ಯೆ, ಪ್ರಕರಣದ ತನಿಖೆಯನ್ನು ವಿಭಜಿಸಿ ರಾಜ್ಯ ಸರಕಾರ ಹೊರಡಿಸಿರುವ ಆದೇಶದ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ಈ ವಿವಾದ ಈಗಾಗಲೇ ಹೈಕೋರ್ಟ್ ಕಟಕಟೆಯಲ್ಲಿದ್ದು, ತೀರ್ಪು ಹೊರಬಿದ್ದ ಮೇಲೆ ಉತ್ತರ ನೀಡುವುದಾಗಿ ಹೇಳಿದ್ದಾರೆ.

ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ನವೆಂಬರ್ 18ರಂದೇ ಪ್ರಕರಣ ದಾಖಲಿಸಿರುವುದಾಗಿ ಜೆಡಿಎಸ್ ವಕ್ತಾರ ದತ್ತಾ ಪ್ರತಿಕ್ರಿಯೆ ನೀಡಿದ್ದು, ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಹಗರಣದ ತನಿಖೆ ಲೋಕಾಯುಕ್ತರ ವ್ಯಾಪ್ತಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ