ಲೋಕಾಯುಕ್ತರು ಕೆಐಎಡಿಬಿ ಭೂ ಹಗರಣದ ಕುರಿತು ನಡೆಸುತ್ತಿರುವ ತನಿಖೆಯನ್ನು ಸರಕಾರ ದಿಕ್ಕು ತಪ್ಪಿಸುತ್ತಿದೆ ಎಂದು ಶಾಸಕ ಕೃಷ್ಣಭೈರೇಗೌಡ ಆರೋಪಿಸಿದ್ದಾರೆ.
ಕೆಐಎಡಿಬಿ ಭೂಮಿ ವಶಪಡಿಸಿಕೊಂಡಿರುವುದರಲ್ಲಿ ರಾಜಕಾರಣಿಗಳಲ್ಲದೆ ಸರಕಾರಿ ಅಧಿಕಾರಿಗಳೂ ಸಹ ನೇರ ಹೊಣೆಯಾಗಿದ್ದಾರೆ ಎಂದರು. ಯಲಹಂಕ ಭಾಗದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಹಕ್ಕುಪತ್ರ ನೀಡುವಂತೆ ಅಧಿಕಾರಿಗಳೇ ನೋಡಿಕೊಂಡಿದ್ದಾರೆ. ಇಂತಹ ಹಗರಣಗಳನ್ನು ಲೋಕಾಯುಕ್ತರು ಅತಿ ಸೂಕ್ಷ್ಮವಾಗಿ ತನಿಖೆ ನಡೆಸಿದರೆ ಇನ್ನಷ್ಟು ಹಗರಣ ಬಯಲಾಗಲಿದೆ ಎಂದು ಹೇಳಿದರು.
ಬೆಟ್ಟಹಲಸೂರು ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಹಿರಿಯ ನಾಯಕ, ಸಂಸದ ಅನಂತ್ ಕುಮಾರ್ ಅವರು ಕರ್ನಾಟಕವನ್ನು ಬಿಹಾರಕ್ಕೆ ಹೋಲಿಸಿ, ಬಿಹಾರವನ್ನು ಕರ್ನಾಟಕಕ್ಕೆ ಹೋಲಿಸಿದ್ದಾರೆ. ಆದರೂ ಅವರ ಪಕ್ಷದವರು ನಿರ್ಲಿಪ್ತರಾಗಿರಲು ಕಾರಣವೇನು ಎಂದು ಪ್ರಶ್ನಿಸಿದರು.