ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ವಿಧಿವಶ (Santhosh Kumar Gulwadi | Taranga | Passes Away | innovative journalism,)
Bookmark and Share Feedback Print
 
PR
ಹಿರಿಯ ಪತ್ರಕರ್ತ, ತರಂಗ ವಾರಪತ್ರಿಕೆ ಮಾಜಿ ಸಂಪಾದಕ ಗುಲ್ವಾಡಿ ಸಂತೋಷ್ ಕುಮಾರ್ (72) ಹೃದಯಾಘಾತದಿಂದ ಮಂಗಳವಾರ ವಿಧಿವಶರಾಗಿದ್ದಾರೆ.

ಮೃತರು ಪತ್ನಿ ಸುದೇಷ್ಣಾ, ಪುತ್ರಿ ಸಂಸ್ಕೃತಿ, ಪುತ್ರ ಡಾ.ಸಮರ್ಥ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮಲ್ಲೇಶ್ವರದ ಎವರೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಗುಲ್ವಾಡಿ, ಸಂಜೆ 6.45ರ ವೇಳೆಗೆ ನೆಲಮಹಡಿಯಲ್ಲಿ ಪತ್ರಗಳನ್ನು ಪರಿಶೀಲಿಸುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆ, ಅಲ್ಲಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೂಲತಃ ಕುಂದಾಪುರ ತಾಲೂಕಿನ ಗುಲ್ವಾಡಿಯವರಾದ ಅವರು, ಮಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. 1983ರಲ್ಲಿ ತರಂಗ ವಾರಪತ್ರಿಕೆ ಸಂಪದಕಾರಿಗ ಸುಮಾರು 18 ವರ್ಷಗಳ ಕಾಲ ದುಡಿದಿದ್ದರು. ಅವರ ಸಂಪಾದಕೀಯ ಬರಹ ಅಂತರಂಗ-ಬಹಿರಂಗ ಅಪಾರ ಜನಮನ್ನಣೆ ಗಳಿಸಿತ್ತು. ಮುಂಬೈನಲ್ಲಿ ಪತ್ರಿಕೋದ್ಯಮ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ಫ್ರಿಲ್ಯಾನ್ಸರ್ ಆಗಿ ದುಡಿದಿದ್ದರು. ಆ ಸಮಯದಲ್ಲಿ ಅವರು ಪ್ರಜಾವಾಣಿ ಮತ್ತು ಸುಧಾ ವಾರಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ತರಂಗ ವಾರಪತ್ರಿಕೆಯಿಂದ ಹೊರಬಂದ ಅವರು ವಿಜಯ್ ಸಂಕೇಶ್ವರ್ ಅವರ 'ನೂತನ'ದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಗುಲ್ವಾಡಿ ಅವರು ಮೊದಲ ಮೊಗ್ಗು ಎಂಬ ಕಥಾ ಸಂಕಲವನ್ನೂ ಹೊರತಂದಿದ್ದರು.

ಅಲ್ಲದೇ ಅಂತರಂಗ-ಬಹಿರಂಗ ಅಂಕಣ ಬರಹಗಳ ಕೃತಿಗೆ 1993ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1990ರಲ್ಲಿ ರಾಜ್ಯೋತ್ಸವ, ವಿಶ್ವೇಶ್ವರಯ್ಯ, ವೀರ ಸಾವರ್ಕರ್, ಭಾರ್ಗವ,ಕೊಂಕಣಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ