ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನೂ ಭ್ರಷ್ಟ, ಸಿಎಂ ಆಗುವ ಭರವಸೆಯಿಲ್ಲ: ಸಿದ್ದರಾಮಯ್ಯ (Sidharamaih | Congress | BS Yeddyurappa | Karnataka)
Bookmark and Share Feedback Print
 
ರಾಜಕಾರಣಿಗಳೆಂದರೆ ಅಪರಂಜಿಗಳಾಗಿರಲು ಸಾಧ್ಯವೇ? ಚುನಾವಣೆ ಗೆಲ್ಲುವುದೆಂದರೆ ಅಷ್ಟೊಂದು ಸುಲಭವೇ? ಹಣವಿಲ್ಲದೆ ಗೆಲುವು ಸಾಧಿಸಲು ಆಗದು. ನಮಗೆ ಸಿಗುವುದು ಕಪ್ಪು ಹಣ. ಆದರೆ ಚುನಾವಣಾ ಆಯೋಗಕ್ಕೆ ಸುಳ್ಳು ಹೇಳುತ್ತೇವೆ. ಆ ನಿಟ್ಟಿನಲ್ಲಿ ನಾನು ಕೂಡ ಭ್ರಷ್ಟ. ನಾನು ಮುಖ್ಯಮಂತ್ರಿಯಾಗುವ ಗ್ಯಾರಂಟಿಯಿಲ್ಲ ಎಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.

ವಿಶ್ವ ಭ್ರಷ್ಟಾಚಾರ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಚುನಾವಣೆ ಗೆಲ್ಲಲು ಹಣ ಬೇಕು. ಹಣ ಪಕ್ಷದಲ್ಲಿ ಉತ್ಪತ್ತಿಯಾಗುವುದಿಲ್ಲ. ಯಾರಾದರೂ ಕೊಡಬೇಕು. ಹಾಗೆ ಕೊಡುವವರು ನೀಡುವುದು ಕಪ್ಪು ಹಣ. ಚುನಾವಣಾ ಆಯೋಗಕ್ಕೆ ನಾವು ಕೊಡುವುದು ಸುಳ್ಳು ಲೆಕ್ಕ. ಈ ಅರ್ಥದಲ್ಲಿ ನಾನೂ ಭ್ರಷ್ಟ ಎಂದು ಅಪರೂಪಕ್ಕೆಂಬಂತೆ ಸತ್ಯವನ್ನೇ ನುಡಿದರು.

ಸುಳ್ಳು ಹೇಳುವುದು ಆತ್ಮವಂಚನೆ ಎಂಬ ಕಾರಣಕ್ಕಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಈಗ ಮಹಾತ್ಮ ಗಾಂಧೀಜಿಯವರನ್ನು ತಂದು ಚುನಾವಣೆಗೆ ನಿಲ್ಲಿಸಿದರೂ ಜನ ಓಟು ಹಾಕಲಾರರು. ಪ್ರಾಮಾಣಿಕರಿಗೆ ಈಗ ಬೆಲೆಯಿಲ್ಲ. ಹಣವಿಲ್ಲದೆ ಗೆಲುವು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ವ್ಯವಸ್ಥೆಯ ವಿಶ್ಲೇಷಣೆ ಮಾಡಿದರು.

ನಾನು ಮುಖ್ಯಮಂತ್ರಿ ಆಗೇ ಆಗುತ್ತೇನೆ ಎಂಬ ಭರವಸೆ-ವಿಶ್ವಾಸ ನನ್ನಲ್ಲಿಲ್ಲ. ಈಗ ಇರುವುದು ಹೋರಾಟದ ರಾಜಕಾರಣ. ಪ್ರತಿಯೊಬ್ಬರೂ ಹೋರಾಟದಲ್ಲೇ ನಿರತರಾಗಿದ್ದಾರೆ. ಈ ರಾಜಕೀಯದಲ್ಲಿ ಇರಬೇಕೇ ಅಥವಾ ಬೇಡವೇ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ. ಕನಿಷ್ಠ ಮುಖ್ಯಮಂತ್ರಿಯಾಗುವ ತನಕವಾದರೂ ರಾಜಕೀಯದಲ್ಲಿ ಇರೋಣವೆಂದರೆ ಆ ಗ್ಯಾರಂಟಿಯೂ ಇಲ್ಲ ಎಂದು ಲಘು ಹಾಸ್ಯಧಾಟಿಯಲ್ಲಿ ಹೇಳಿ ನಕ್ಕರು.

ಭ್ರಷ್ಟಾಚಾರ ವಿರೋಧಿ ರಂಗ ಮತ್ತು ಮಾಜಿ ಶಾಸಕರ ವೇದಿಕೆ ಜಂಟಿ ಸಹಯೋಗದಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿ 'ಭ್ರಷ್ಟಾಚಾರ ನಿರ್ಮೂಲನೆ; ಸಾಧ್ಯತೆ ಮತ್ತು ಸವಾಲುಗಳ ವಿಚಾರ ಸಂಕಿರಣ' ಕಾರ್ಯಕ್ರಮ ಉದ್ಘಾಟಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ಸಮಾಜಕ್ಕೆ ಹೊಸತಲ್ಲ. ಆದರೆ ಈಗ ಅದು ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಹೋಗಿದೆ. ನೈತಿಕ ಮೌಲ್ಯಗಳಿಗೆ ಮೂರು ಕಾಸಿನ ಬೆಲೆಯಿಲ್ಲ. ಭಂಡತನವೇ ನೈತಿಕತೆ ಎನ್ನುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಊಟಕ್ಕೆ ಕರೆದ ಸ್ನೇಹಿತನ ಪತ್ನಿಯನ್ನೇ ಅತ್ಯಾಚಾರ ಮಾಡುವುದು, ಅನ್ಯ ಸ್ತ್ರೀಗೆ ಮುತ್ತಿಟ್ಟವರು ಸಚಿವರಾಗುತ್ತಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ