ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಡ್ಕರಿ ಯಡಿಯೂರಪ್ಪಗೆ ಸೇಲ್ ಆಗಿದ್ದಾರೆ: ರೇವಣ್ಣ (Nithin Gadkari | BJP | Yeddyurappa | Congress | Deve gowda)
Bookmark and Share Feedback Print
 
NRB
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 'ಸೇಲ್' ಆಗಿದ್ದಾರೆ ಎಂದು ಜೆಡಿಎಲ್‌ಪಿ ಮುಖಂಡ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ಶುಕ್ರವಾರ ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿಯನ್ನೇ ಬಿಜೆಪಿ ಹೈಕಮಾಂಡ್ ಅಧಿಕೃತವಾಗಿ ಬೆಂಬಲಿಸುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ ಭಾರೀ ಪ್ರಮಾಣದ ಕಪ್ಪ ಕಾಣಿಕೆ ಕೊಟ್ಟಿದ್ದಾರೆ. ಹಾಗಾಗಿ ಗಡ್ಕರಿ ಕೂಡ ಶಬ್ಬಾಸ್‌ಗಿರಿ ನೀಡಿದ್ದಾರೆ ಎಂದು ದೂರಿದರು.

ಸ್ವಜನಪಕ್ಷಪಾತ ಮತ್ತು ಕುಟುಂಬ ವರ್ಗದವರಿಗೆ ಭೂಮಿ ಹಂಚಿರುವ ಬಗ್ಗೆ ಮಾಧ್ಯಮಗಳೇ ದಾಖಲೆ ಸಹಿತ ಬಹಿರಂಗ ಮಾಡಿದ್ದರೂ ಕೂಡ ಬಿಜೆಪಿ ಹೈಕಮಾಂಡ್ ಭ್ರಷ್ಟ ಮುಖ್ಯಮಂತ್ರಿಯ ಬೆಂಬಲಕ್ಕೆ ನಿಂತಿರುವುದು ದುರಂತ ಎಂದು ಹೇಳಿದರು.

ಅಲ್ಲದೇ ದೇವೇಗೌಡರ ಕುಟುಂಬದ ಆಸ್ತಿ ಬಗ್ಗೆ ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದ ಅವರು, ದೇವೇಗೌಡರಾಗಲಿ, ನಮ್ಮ ಕುಟುಂಬದವರಾರು ಅಕ್ರಮವಾಗಿ ಜಮೀನು ಸಂಪಾದಿಸಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ