ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕಾರಣಿಗಳಿಗೆ ಜನರ ಬಗ್ಗೆ ಕಾಳಜಿ ಇಲ್ಲ: ಅಂಬರೀಷ್ (Ambarish | Kannada cinema | Hassan | Congress | JDS)
Bookmark and Share Feedback Print
 
PTI
'ಪ್ರಸ್ತುತ ರಾಜಕೀಯ ಬೆಳವಣಿಗೆ ತುಂಬಾ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿರುವ ನಟ, ಮಾಜಿ ಸಚಿವ ಅಂಬರೀಷ್ ಅವರು, ರಾಜಕಾರಣಿಗಳಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲ' ಎಂದು ದೂರಿದ್ದಾರೆ.

ಶುಕ್ರವಾರ ಹಾಸನದ ಮುದ್ದೇನಹಳ್ಳಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತ, ಇತ್ತೀಚೆಗೆ ದಿನಂಪ್ರತಿ ಟಿವಿ ಮಾಧ್ಯಮ, ಪತ್ರಿಕೆಗಳನ್ನು ನೋಡೋದಕ್ಕೆ ಬೇಜಾರಾಗುತ್ತಿದೆ. ಎಲ್ಲಾ ಪಕ್ಷದ ರಾಜಕಾರಣಿಗಳು ಆರೋಪ-ಪ್ರತ್ಯಾಪರೋಗಳಲ್ಲಿಯೇ ತೊಡಗಿಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ನಾನು ಯಾವುದೇ ಒಂದು ಪಕ್ಷ, ವ್ಯಕ್ತಿಯ ಬಗ್ಗೆ ಆರೋಪಿಸಿ ಮಾತನಾಡಲಾರೆ. ಒಟ್ಟಾರೆ ಪ್ರಸ್ತುತ ಬೆಳವಣಿಗೆ ನೋವು ತಂದಿದೆ. ನಾನೊಬ್ಬ ನಟನಾಗಿ ಎಲ್ಲಾ ಜಾತಿ, ಧರ್ಮದ ಜನರ ಅಭಿಮಾನ ಪ್ರೀತಿಯನ್ನು ಪಡೆದಿದ್ದೇನೆ. ನನಗೆ ಅದರಲ್ಲಿಯೇ ಸಂತೋಷ ಇದೆ. ಹಾಗಾಗಿ ರಾಜಕೀಯದ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು.

ನಾನೇನಿದ್ದರೂ ನಮ್ಮ ಬಗ್ಗೆ ಮಾತ್ರ ಹೇಳಬಹುದು ಅಷ್ಟೇ, ನಾನು ಎಲ್ಲಾ ಪಕ್ಷದವರ ಅನ್ನ ತಿಂದಿದ್ದೇನೆ. ಆ ನಿಟ್ಟಿನಲ್ಲಿ ರಾಜ್ಯದ ಜನರಿಗೆ ಸುಖ,ಸಂತೋಷ, ಸಂಪತ್ತು ದೊರೆಯಲಿ ಎಂಬ ಆಶಯ ನನ್ನದು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ