ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಂಪರು ಪರೀಕ್ಷೆಗೆ ಬರಲಿ: ನಿತ್ಯಾನಂದ ಶಿಷ್ಯರ ಸವಾಲು (Nithyananda | Lenin | Bidadi | Ranjitha | Court)
Bookmark and Share Feedback Print
 
ಬಿಡದಿ ಜ್ಞಾನಪೀಠದ ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಶಿಷ್ಯರ ಮೇಲಿರುವ ರಾಸಲೀಲೆ ಆರೋಪದ ಸತ್ಯಾಸತ್ಯತೆ ಹೊರಬರಲು ನಾವು ಮಂಪರು ಪರೀಕ್ಷೆಗೆ ತಯಾರಿದ್ದು, ಲೆನಿನ್ ಕೂಡ ಪರೀಕ್ಷೆಗೆ ಒಳಗಾಗಲಿ ಎಂದು ನಿತ್ಯಾನಂದ ಶಿಷ್ಯರು ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿತ್ಯಾನಂದನ ಶಿಷ್ಯರಾದ ನಿತ್ಯ ಸಚ್ಚಿದಾನಂದ ಹಾಗೂ ನಿತ್ಯ ಭಕ್ತಾನಂದ, ಯಾವುದೇ ಸಾಕ್ಷಿ, ಆಧಾರಗಳು ಇಲ್ಲದೆ, ಅನೂರ್ಜಿತಗೊಳಿಸುವ ಭೀತಿಯಿಂದ ಲೆನಿನ್ ದಿನಕ್ಕೊಂದು ಹೊಸ, ಹೊಸ ಆರೋಪಗಳನ್ನು ಸೃಷ್ಟಿಸುತ್ತಿದ್ದಾನೆ ಎಂದು ಟೀಕಿಸಿದರು.

ನಿತ್ಯಾನಂದ ಸ್ವಾಮೀಜಿ ಪ್ರಕರಣ ಹಿಂಪಡೆಯಲು 20 ಕೋಟಿ ರೂಪಾಯಿಗಳ ಆಮಿಷ ಒಡ್ಡಿದ್ದಾರೆ ಎನ್ನುವ ಲೆನಿನ್ ಆರೋಪ ಸತ್ಯಕ್ಕೆ ದೂರವಾಗಿದ್ದು, ಆಶ್ರಮದ ಕಡೆಯಿಂದ ಆತನಿಗೆ ಯಾವುದೇ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಬಾರಿ ಲೆನಿನ್ ಸುದ್ದಿಗೋಷ್ಠಿ ವೇಳೆ ಆಶ್ರಮದ ಸನ್ಯಾಸಿನಿಯರು ಅಡ್ಡಿಪಡಿಸಲು ಬಂದಿದ್ದರು ಎಂದು ಲೆನಿನ್ ಆರೋಪಿಸಿ ಸುಳ್ಳು ಪ್ರಕರಣ ದಾಖಲಿಸಿದ್ದಾನೆ. ಅದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ನಾವು ಸಾರ್ವಜನಿಕವಾಗಿ ಹಾಜರಿದ್ದೇವು ಎಂದು ಮಹಾ ನಿತ್ಯ ಭಕ್ತ, ಮಹಾ ಪ್ರಿಯನಂದಾ ಹಾಗೂ ಮಹಾ ನಿತ್ಯ ಅಚಲಾನಂದ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ