ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲಾಸ್‌ಏಂಜಲೀಸ್‌ನಲ್ಲಿ ಕಾಮಿ ನಿತ್ಯಾನಂದನಿಗೆ 'ದ್ವೀಪ' ಬೇಕಿತ್ತಂತೆ (Swami Nityananda | Nityananda | Ranjitha | CID | Los Angeles)
ಕಾಮಿ ಸ್ವಾಮಿ ನಿತ್ಯಾನಂದ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ದ್ವೀಪ ಖರೀದಿಸಲು ಯತ್ನಿಸಿದ್ದರ ಕುರಿತು ನಿತ್ಯಾನಂದ ವಿರುದ್ಧ ತನಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಕುತೂಹಲಕರ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಈ ಹಿಂದೆ ನಟಿ ರಂಜಿತಾಳ ಜತೆ ರಾಸಲೀಲೆಯಲ್ಲಿ ತೊಡಗಿದ್ದ ನಿತ್ಯಾನಂದನ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಲಾಸ್‌ಏಂಜಲೀಸ್‌ನಲ್ಲಿ ದ್ವೀಪಕೊಳ್ಳುವ ನಿರ್ಧಾರದ ಬಗ್ಗೆ ಸಂಪೂರ್ಣವಾಗಿ ನಿರಾಕರಿಸಿದ್ದ. ಆದರೆ ದ್ವೀಪ ಖರೀದಿಸಲು ಯತ್ನಿಸಿರುವ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ನಿತ್ಯಾನಂದನ ಬಗ್ಗೆ ಕೇವಲ ಆರೋಪ ಪಟ್ಟಿ ದಾಖಲಿಸಿರುವುದು ಮಾತ್ರವಲ್ಲ, ಆತನ ಆಸ್ತಿ ವಿವರಗಳು ಹಾಗೂ ಬಂಡವಾಳ ಹೂಡಿಕೆ ಯೋಜನೆಯ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಬಾಬಾರಾಮ್‌ದೇವ್ ಎಂಬುವರು ಸ್ಕಾಟ್‌ಲ್ಯಾಂಡ್‌ನಲ್ಲಿ ದ್ವೀಪ ಖರೀದಿಸಿದ ನಂತರ ನಿತ್ಯಾನಂದ ತನ್ನ ಶಿಷ್ಯನೊಬ್ಬನ ಸಲಹೆ ಮೇರೆಗೆ ಮೊದಲ ಹಂತದಲ್ಲಿ ಲಾಸ್ ಏಂಜಲೀಸ್‌ನಲ್ಲಿ ಆಶ್ರಮಕ್ಕಾಗಿ 100 ಎಕರೆ ಜಾಗ ಖರೀದಿಸಿದ್ದಾನೆ. ನಂತರ ಲಾಸ್ ಏಂಜಲೀಸ್ ಬಳಿಯೇ ದ್ವೀಪವನ್ನು ಖರೀದಿಸಿ ಅಲ್ಲಿಯೂ ಆಶ್ರಮ ಸ್ಥಾಪಿಸಲು ನಿರ್ಧರಿಸಿದ್ದ. ಆದರೆ ನಿತ್ಯಾನಂದ ಈ ಹಿಂದೆ ತಾನು ಎಲ್ಲಿಯೂ ದ್ವೀಪ ಖರೀದಿಸಲು ಯತ್ನಿಸಿಲ್ಲ ಎಂದು ಹೇಳಿಕೊಂಡಿದ್ದ ಎಂಬುದಾಗಿ ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ನಿತ್ಯಾನಂದ ಮಲೇಶಿಯಾ, ಸಿಂಗಾಪುರ್, ಬ್ರೆಜಿಲ್ ಮತ್ತು ಇಂಡೋನೇಷಿಯಾದಲ್ಲಿ ತಲಾ ಒಂದೊಂದು ಸೇರಿದಂತೆ ಅಮೆರಿಕದಲ್ಲಿ ನಾಲ್ಕು ಆಶ್ರಮಗಳನ್ನು ಸ್ಥಾಪಿಸಿದ್ದಾನೆ. ಆದರೆ ನಿತ್ಯಾನಂದನ ಕಾಮಕೇಳಿ ಪ್ರಕರಣ ಬಹಿರಂಗಗೊಂಡ ನಂತರ ಲಾಸ್ ಏಂಜಲೀಸ್ ಮತ್ತು ಬಿಡದಿ ಆಶ್ರಮ ಮಾತ್ರ ಕ್ರಿಯಾಶೀಲವಾಗಿವೆ ಎಂದು ವಿವರಿಸಿದ್ದಾರೆ.