ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೌಡರಿಗೆ ಪಂಚಾಯ್ತಿ ಚುನಾವಣೆ ಉಸಾಬರಿ ಯಾಕೆ?: ಸೋಮಣ್ಣ (Deve gowda | Somanna | JDS | BJP | Hassan | kumaraswamy)
Bookmark and Share Feedback Print
 
ಪಂಚಾಯ್ತಿಯಂತಹ ಸಣ್ಣ-ಪುಟ್ಟ ಚುನಾವಣೆಗೆ ರಾಷ್ಟ್ರ ನಾಯಕರಾದ ದೇವೇಗೌಡರು ಏಕೆ ಬರಬೇಕು? ಇದೆಲ್ಲವನ್ನು ನಮ್ಮಂತಹ ಸಣ್ಣ ಪುಟ್ಟ ನಾಯಕರಿಗೆ ಬಿಟ್ಟು ಬಿಡಲಿ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಸಂಘರ್ಷದ ರಾಜಕಾರಣ ಮಾಡಲ್ಲ. ಬಿಜೆಪಿಗೆ ಪ್ರಚಂಡ ಗೆಲುವನ್ನೇ ತಂದುಕೊಟ್ಟು ಬಿಡುತ್ತೇನೆ ಎಂದು ಹೇಳುವುದೂ ಇಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಖಾತೆ ತೆರೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರು ಮತ್ತು ಹಾಸನ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿದ್ದಾರೆ. ಇದು ದೊಡ್ಡ ಜವಾಬ್ದಾರಿ ಹಾಗಾಗಿ ಸೋಮಣ್ಣ ದೊಡ್ಡವನಲ್ಲವೇ ಎಂದು ಪ್ರಶ್ನಿಸಿದ ಅವರು. ನಾನು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಬಡವರಿಗೆ ಮತ್ತು ಎಪಿಎಲ್ ಪಡಿತರದಾರರಿಗೆ 15ಕೆಜಿ ಅಕ್ಕಿ ಕೊಡುತ್ತೇನೆ. ಹೊಸದಾಗಿ ಸಮೀಕ್ಷೆ ಮಾಡುತ್ತೇನೆ ಎಂದು ಹೇಳಿರುವುದಕ್ಕೆ ರಾಜ್ಯ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ. ಇದು ಮೊಸರಲ್ಲಿ ಕಲ್ಲು ಹುಡುಕುವ ಯತ್ನ. ಒಬ್ಬ ಸಚಿವನಾಗಿ ನನಗೂ ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎಂದು ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ