ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವೇದಿಕೆಯಲ್ಲಿ ಹಾಡಿಹೊಗಳಿಕೊಂಡ ಬಂಗಾರಪ್ಪ-ದೇವೇಗೌಡ (Bangarappa | Deve gowda | Kumaraswamy | Channigappa | JDS)
Bookmark and Share Feedback Print
 
'
PTI
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಯಾವತ್ತೂ ಅಧಿಕಾರಕ್ಕೆ ಗಂಟು ಬಿದ್ದವರಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವಿಗೆ ಶ್ರಮಿಸಿದ ಅವರನ್ನು ಎರಡೂ ಪಕ್ಷಗಳೂ ಮೂಲೆಗುಂಪು ಮಾಡಿರುವುದಾಗಿ' ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷ ತೊರೆದಿರುವ ಬಂಗಾರಪ್ಪ ಅವರನ್ನು ದೇವೇಗೌಡ ಮತ್ತು ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಗೌಡರು ಮತ್ತು ಬಂಗಾರಪ್ಪ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬಂಗಾರಪ್ಪನವರು ಅತ್ಯಂತ ಸ್ವಾಭಿಮಾನಿ ರಾಜಕಾರಣಿ. ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿದ್ದ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಜೆಡಿಎಸ್ ಸೇರ್ಪಡೆಗೆ ಅವರು ಯಾವ ಷರತ್ತೂ ವಿಧಿಸಿರಲಿಲ್ಲ ಎಂದು ಗೌಡರು ಬಹುಪರಾಕ್ ಹೇಳಿದರು.

ನಾವಿಬ್ಬರೂ ಸಮಕಾಲೀನ ರಾಜಕಾರಣಿಗಳು, ಭ್ರಷ್ಟರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಆ ನಿಟ್ಟಿನಲ್ಲಿ ಬಂಗಾರಪ್ಪ ಅವರ ಸೇರ್ಪಡೆ ಪಕ್ಷಕ್ಕೆ ಹೆಚ್ಚಿನ ಬಲ ತಂದಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಮತದಾರರು ಪಕ್ಷಾಂತರ ಮಾಡ್ತಾರೆ, ನಾವು ಮಾಡಿದ್ರೆ ತಪ್ಪೇ?: ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಬಂಗಾರಪ್ಪ, ಮಾಜಿ ಪ್ರಧಾನಿ ದೇವೇಗೌಡರ ಮತ್ತು ಕುಮಾರಸ್ವಾಮಿ ನಾಯಕತ್ವದ ಜೆಡಿಎಸ್ ಪಕ್ಷವನ್ನು ನಾವು ಕಟ್ಟಿಬೆಳೆಸಬೇಕಾಗಿದೆ ಎಂದು ಹೇಳುವ ಮೂಲಕ ಉಭಯ ನಾಯಕರು ವೇದಿಕೆಯಲ್ಲಿ ಪರಸ್ಪರ ಹಾಡಿಹೊಗಳಿಕೊಂಡರು.

NRB
ಕೆಲವರ ದೃಷ್ಟಿಯಲ್ಲಿ ನಾನು ಪಕ್ಷಾಂತರಿ ಎಂಬ ಭಾವನೆ ಇದೆ. ಪಕ್ಷಾಂತರ, ಬದಲಾವಣೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ನಡೆದಿರುವ ಸಾಮಾನ್ಯ ಅಂಶವಾಗಿದೆ. ಇಂದು ಮತದಾರ ಕೂಡ ಒಂದೊಂದು ಬಾರಿ, ಒಂದೊಂದು ಪಕ್ಷಕ್ಕೆ ಮತದಾನ ಮಾಡುತ್ತಾನೆ. ಹಾಗಿದ್ದ ಮೇಲೆ ಜನಪ್ರತಿನಿಧಿಗಳಾದ ನಾವು ಪಕ್ಷಾಂತರ ಮಾಡಬಾರದೇ ಎಂದು ಪ್ರಶ್ನಿಸಿ ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಂಡರು.

ನಾನು ತಪ್ಪು ಮಾಡಿಲ್ಲ. ನನಗೆ ಯಾವುದೇ ಅಧಿಕಾರದ ಆಸೆಯೂ ಇಲ್ಲ. ಆದರೆ ಎಚ್.ಡಿ.ಕುಮಾರಸ್ವಾಮಿಯವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬುದು ನನ್ನ ಬಯಕೆಯಾಗಿದೆ ಎಂದು ಬಂಗಾರಪ್ಪ ಹೇಳಿದರು.

ಭ್ರಷ್ಟ ಬಿಜೆಪಿ ಸರಕಾರಕ್ಕೆ ಬಿಸಿ ಮುಟ್ಟಿಸಿದ ಧೈರ್ಯವಂತ ಇದ್ರೆ ಅದು ಕುಮಾರಸ್ವಾಮಿ ಮಾತ್ರ ಎಂದು ಶ್ಲಾಘಿಸಿದ ಬಂಗಾರಪ್ಪ, ನಾನು ಅವರನ್ನು ಮೆಚ್ಚಿಸಲಿಕ್ಕೆ ಈ ಮಾತನ್ನು ಹೇಳುತ್ತಿಲ್ಲ. ಯಾಕೆಂದ್ರೆ ಈ ಬಂಗಾರಪ್ಪ ಹಾಗೆಲ್ಲ ಯಾರನ್ನೂ ಹೊಗಳಲ್ಲ. ಹಾಗಾಗಿ ನನ್ನ ಅಭಿಮಾನಿಗಳು, ಕಾರ್ಯಕರ್ತರು ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಸೇರಿದಂತೆ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್‌ಗೆ ಬೆಂಬಲ ನೀಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಟೀಕಾಕಾರರರ ಬಾಯಿಗೆ ಬೀಗ-ಕುಮಾರಸ್ವಾಮಿ: ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಟೀಕಿಸುತ್ತಿದ್ದವರ ಬಾಯಿಗೆ ಬಂಗಾರಪ್ಪ ಅವರ ಸೇರ್ಪಡೆಯಿಂದ ಬೀಗ ಬಿದ್ದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಂಗಾರಪ್ಪ ಅವರ ಸೇರ್ಪಡೆಯಿಂದ ವಿರೋಧಿಗಳಿಗೆ ತಕ್ಕ ಉತ್ತರ ಸಿಕ್ಕಂತಾಗಿದೆ. ಅಷ್ಟೇ ಅಲ್ಲ ಹಿರಿಯ ಮುತ್ಸದ್ಧಿ ಬಂಗಾರಪ್ಪ ಅವರ ಸೇರ್ಪಡೆಯಿಂದ ಜೆಡಿಎಸ್‌ಗೂ ಅನೆ ಬಲ ಬಂದಂತಾಗಿದೆ ಎಂದರು.

ಚನ್ನಿಗಪ್ಪ-ಗೌರಿ ಶಂಕರ್ ಜೆಡಿಎಸ್‌ಗೆ ಸೇರ್ಪಡೆ: ಮಾಜಿ ಸಚಿವ ಚನ್ನಿಗಪ್ಪ ಹಾಗೂ ಪುತ್ರ ಗೌರಿ ಶಂಕರ್ ಅವರು ಇಂದು ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ