ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವೇಗೌಡ ಮತ್ತು ಅವರ ಸಂಬಂಧಿಕರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನೂರಾರು ಕೋಟಿ ರೂ.ವಹಿವಾಟು ನಡೆಸಿದ್ದಾರೆ. ಈ ಕುರಿತು ಲೋಕಾಯುಕ್ತರು ತನಿಖೆ ನಡೆಸಬೇಕೆಂದು ದೂರು ಸಲ್ಲಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದ್ದಾರೆ.
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರ ಕುಟುಂಬ ಮತ್ತು ಅವರ ಸಂಬಂಧಿಕರ ಒಡೆತನದ ಕಂಪನಿಗಳಲ್ಲಿ 101.08 ಕೋಟಿ ರೂಪಾಯಿ ವಹಿವಾಟು ನಡೆದಿರುವುದಾಗಿ ಆರೋಪಿಸಿದ್ದಾರೆ.
ಇದರಲ್ಲಿ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಎದುಕಾಣುತ್ತಿದೆ. ಬನಶಂಕರಿ ಟ್ರೇಡಿಂಗ್ ಕಂಪನಿ, ರಾಜರಾಜೇಶ್ವರಿ ಇಂಟರ್ ನ್ಯಾಷನಲ್ ಪಾಲಿಮರ್ಸ್, ಹಂಸ ಟ್ರೇಡಿಂಗ್ ಕಂಪನಿ, ಶಾಕಂಬರಿ ಎಂಟರ್‌ಪ್ರೈಸಸ್, ನಿಖಿಲ್ ಕಂಪನಿ ಸೇರಿದಂತೆ ಗೌಡರ ಕುಟುಂಬದ ಸದಸ್ಯರ ಖಾತೆಗಳಲ್ಲಿ 101.08 ಕೋಟಿ ರೂ.ವಹಿವಾಟು ನಡೆದಿರುವುದು ದಾಖಲೆ ಸಮೇತ ಹೊರಬಿದ್ದಿದೆ.
ಸದರಿ ಕಂಪನಿಗಳು ಬೇರಾವ ವರ್ಷದಲ್ಲೂ ಇಷ್ಟು ಪ್ರಮಾಣದ ವಹಿವಾಟು ನಡೆಸಿಲ್ಲ. ಹೀಗಾಗಿ ಇಧರಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದ್ದು, ಲೋಕಾಯುಕ್ತರಿಗೆ ತನಿಖೆ ನಡೆಸುವಂತೆ ದೂರು ಸಲ್ಲಿಸುವುದಾಗಿ ಪುಟ್ಟಸ್ವಾಮಿ ತಿಳಿಸಿದ್ದಾರೆ.