ಕಾಮಿ ನಿತ್ಯಾನಂದ ಸ್ವಾಮಿ ಶಿಷ್ಯನೊಬ್ಬ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ ಸಂದರ್ಭ ಸಾರ್ವಜನಿಕರು ಗೂಸಾ ನೀಡಿರುವ ಘಟನೆ ಗುರುವಾರ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದ ಬಳಿ ನಡೆದಿದೆ.
ನಿತ್ಯಾನಂದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆ ನಿಟ್ಟಿನಲ್ಲಿ ಪ್ರಕರಣದ ಕುರಿತು ಇಂದು ನಿತ್ಯಾನಂದ ಖುದ್ದಾಗಿ ರಾಮನಗರ ಕೋರ್ಟ್‌ಗೆ ಹಾಜರಾಗಿದ್ದರು.
ನ್ಯಾಯಾಲಯದ ವಿಚಾರಣೆ ನಂತರ ನಿತ್ಯಾನಂದ ಶಿಷ್ಯರ ಬೆಂಗಾವಲಿನಲ್ಲಿ ಕಾರಿನಲ್ಲಿ ಬಿಡದಿ ಆಶ್ರಮದತ್ತ ತೆರಳುತ್ತಿರುವ ಸಮಯದಲ್ಲಿ ಮಾಧ್ಯಮವರು ಆ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ಆಗ ನಿತ್ಯಾನಂದ ಶಿಷ್ಯ ಜೈ ಈಶ್ವರ್ ಎಂಬಾತ ಹಲ್ಲೆ ನಡೆಸಲು ಮುಂದಾಗಿದ್ದ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆತನಿಗೆ ಗೂಸಾ ನೀಡಿದ್ದರು.
ನಿತ್ಯಾನಂದ ಶಿಷ್ಯ ಜೈ ಈಶ್ವರ್ ಕಾರು ಹತ್ತಿ ಪರಾರಿಯಾಗಲು ಯತ್ನಿಸಿದಾಗ ಮತ್ತೆ ಬೆನ್ನಟ್ಟಿ ಅವನನ್ನು ಅಡ್ಡಗಟ್ಟಿ ಥಳಿಸಲು ಮುಂದಾದಾಗ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮೆಂದ್ರ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.