ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಂಗಳೂರು: ವಾಮಚಾರಕ್ಕೆ ಹಸುಗೂಸು ಬಲಿ-ಆರೋಪಿಗಳ ಸೆರೆ (Mangalore | Police | Arrest | Yeyyadi | Vamachara)
Bookmark and Share Feedback Print
 
ವಾಮಚಾರಕ್ಕೆ ನಾಲ್ಕು ವರ್ಷದ ಪುಟ್ಟ ಕಂದಮ್ಮನನ್ನು ಬಲಿ ಕೊಟ್ಟಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಯಯ್ಯಾಡಿಯಲ್ಲಿ ಜರುಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಮೂಲತಃ ಬಿಹಾರದ ಫಿರನ್ ಕುಮಾರ್ ಮತ್ತು ಅಂಜಲಿ ದೇವಿ ದಂಪತಿಯ ನಾಲ್ಕು ವರ್ಷದ ಪುತ್ರಿ ಪ್ರಿಯಾಂಕಳನ್ನು (4) ಸ್ಥಳೀಯ ಕಮಲಾಕ್ಷ ಪುರುಷ (74) ಮತ್ತು ಚಂದ್ರಕಲಾ (23) ವಾಮಚಾರಕ್ಕಾಗಿ ಬಲಿಕೊಟ್ಟಿದ್ದರು. ಅಲ್ಲದೇ ಆತನ ಸಹೋದರ ಮಾಧವ ಪುರುಷ (76)ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮನೆಯಲ್ಲಿ ಮಗು ಕಾಣೆಯಾಗಿರುವ ಬಗ್ಗೆ ಆತಂಕಗೊಂಡ ದಂಪತಿಗಳು ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ಆದರೆ ಎಷ್ಟೇ ಹುಡುಕಾಟ ನಡೆಸಿದರು ಮಗು ಪತ್ತೆಯಾಗಿಲ್ಲವಾಗಿತ್ತು. ನಂತರ ಕಮಲಾಕ್ಷ ಪುರುಷ ಅಡಿಕೆ ತೋಟದಲ್ಲಿ ಮಗುವಿನ ಶವ ದೊರಕಿತ್ತು. ದಂಪತಿಗಳಿಬ್ಬರು ಮನೆ ಸಮೀಪವೇ ಇದ್ದ ರಕ್ತೇಶ್ವರಿ ದೇವರಿಗೆ ಮಗುವನ್ನು ಬಲಿ ಕೊಟ್ಟಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ.

ಝಾ ದಂಪತಿಗಳು ಕೆಲಸಕ್ಕಾಗಿ ಮಂಗಳೂರಿಗೆ ಆಗಮಿಸಿದ್ದರು. ಕೇವಲ ಎರಡು ತಿಂಗಳ ಹಿಂದಷ್ಟೇ ಇಲ್ಲಿ ಯೆಯ್ಯಾಡಿಯಲ್ಲಿ ಬಾಡಿಗೆ ಮನೆ ಪಡೆದಿದ್ದರು. ಆದರೆ ಈ ಕ್ರೂರಿ ಕಮಲಾಕ್ಷ ತನ್ನ ವಾಮಚಾರಕ್ಕೆ ಮುಗ್ದ ಹಸುಳೆಯನ್ನು ಬಲಿ ತೆಗೆದುಕೊಂಡಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈತ ಈ ಹಿಂದೆಯೂ ಇಂತಹ ಕೆಲವು ಅನಾಚಾರ ನಡೆಸಿರುವುದಾಗಿಯೂ ಸ್ಥಳೀಯರು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ