15ಕ್ಕೂ ಹೆಚ್ಚು ಕ್ರಿಮಿನಲ್ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿ ಪೆದ್ದಗುಂಡ ಎಂಬಾತನನ್ನು ಬೆಂಗಳೂರು ಪೊಲೀಸರು ಎನ್ಕೌಂಟರ್ನಲ್ಲಿ ಕೊಂದು ಹಾಕಿದ್ದಾರೆ. ಶನಿವಾರ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಈ ಮಧ್ಯೆ, ಯಲಹಂಕ ಪ್ರದೇಶದಲ್ಲಿ ನಡೆದ ಮತ್ತೊಂದು ಪೊಲೀಸ್ ಎನ್ಕೌಂಟರ್ಗೆ ರೌಡಿ ಶಂಕರ ಅಲಿಯಾಸ್ ಚಂದ್ರ ಎಂಬಾತ ಹತನಾಗಿದ್ದಾನೆ. ಶಂಕರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅವನ ಜೊತೆ ಬೈಕಿನಲ್ಲಿ ಸಾಗುತ್ತಿದ್ದ ಮತ್ತೊಬ್ಬಾತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಇಬ್ಬರೂ ರೌಡಿಗಳು ಕೊಲೆ, ಅಪಹರಣ, ಅತ್ಯಾಚಾರ ಮುಂತಾದ ಹಲವಾರು ಕ್ರಿಮಿನಲ್ ಕೇಸುಗಳಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದರು.