ಮೈಸೂರು ದುರಂತ ನಡೆದ ಬೆನ್ನಲ್ಲೇ ಧಾರಾವಾಡ ಜಿಲ್ಲೆಯ ತಟ್ಟಿಹಳ್ಳಿ ಡ್ಯಾಂನಲ್ಲಿ ತೆಪ್ಪ ಮಗುಚಿ ಐವರು ಜಲಸಮಾಧಿಯಾದ ದಾರುಣ ಘಟನೆ ನಡೆದಿದೆ.
ಮೃತರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಮೃತರೆಲ್ಲರೂ ಎಂದಿನಂತೆ ಹೊಲದಲ್ಲಿ ಕಲಸ ಮುಗಿಸಿಕೊಂಡು ಶನಿವಾರ ಸಂಜೆ ಹೊತ್ತಿಗೆ ತಟ್ಟಿಹಳ್ಳಿ ಡ್ಯಾಂ ಮೂಲಕ ತೆಪ್ಪದಲ್ಲಿ ಮನೆಗೆ ವಾಪಾಸ್ ಹೋಗುತ್ತಿದ್ದಾಗ ದುರಂತ ನಡೆದಿತ್ತು.
ಅಗ್ನಿ ಶಾಮಕ ದಳ ಮತ್ತು ಪೊಲೀಸರು ನಡೆಸಿದ ತೀವ್ರ ಕಾರ್ಯಾಚರಣೆಯ ನಂತರ ಎಲ್ಲ ಶವಗಳನ್ನು ಭಾನುವಾರ ಬೆಳ್ಳಿಗೆಯ ಹೊತ್ತಿಗೆ ಹೊರತೆಗೆಯಲಾಗಿದೆ. ಡ್ಯಾಂ ಬಳಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದು ಕೂಡಾ ಕಾರ್ಯಾಚರಣೆಗೆ ವಿಳಂಬವನ್ನುಂಟು ಮಾಡಿತ್ತು.
ಮಂಗಳವಾರವಷ್ಟೇ ಮೈಸೂರಿನ ಕಡಕೋಳ ಸಮೀಪವಿರುವ ಉಂಡಬತ್ತಿಕೆರೆಗೆ ಮಿನಿಬಸ್‌ವೊಂದು ಉರುಳಿ ಬಿದ್ದು 31 ಮಂದಿ ಜಲಸಮಾಧಿಯಾಗಿದ್ದ ಹೃದಯ ವಿದ್ರಾವಕ ಘಟನೆ ನಡೆದಿತ್ತು.