ಕಳೆದ ಕೆಲವು ದಿನಗಳಿಂದ ತರಕಾರಿ ಬೆಲೆ ಭಾರಿ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ತತ್ತರಿಸುವಂತಾಗಿದೆ. ಮಳೆ ಅನಾಹುತದಿಂದ ಈ ರೀತಿ ಬೆಲೆ ಏರಿಕೆಯಾಗಲು ಕಾರಣವಾಗಿದೆ ಎಂದು ವರದಿಗಳು ಹೇಳಿವೆ.
ತರಕಾರಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಈರುಳಿ ಬೆಲೆಯು ಇದೀಗಲೇ ಕೆ.ಜಿಗೆ 60 ರಿಂದ 80ರೂಪಾಯಿ ವರೆಗೆ ಏರಿಕೆಯಾಗಿದೆ. ಅದೇ ರೀತಿ ಬೆಳ್ಳುಳ್ಳಿ 200 ರಿಂದ 300 ರೂಪಾಯಿ ವರೆಗೆ ಏರಿಕೆಯಾಗುವ ಸಂಭವವಿದೆ.
ದುಬಾರಿ ಬೆಲೆಯಿಂದ ಗ್ರಾಹಕರು ಸುಸ್ತೋ ಸುಸ್ತು ಆಗಿದ್ದಾರೆ. ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ಟೊಮ್ಯಾಟೊ ಬೆಲೆ ಕೂಡಾ ಏರಿಕೆಯಾಗಿದೆ. ಈರುಳ್ಳಿ ಬೆಲೆಯು ರಾಜ್ಯದ ಇತಿಹಾಸದಲ್ಲೇ ದಾಖಲೆಯ ಏರಿಕೆ ಕಂಡಿದ್ದು, ಗ್ರಾಹಕರ ಕಣ್ಣಲ್ಲಿ ನೀರು ಬರಿಸುವಂತಾಗಿದೆ.
ಜಲ್ ಚಂಡಮಾರುತದ ಪ್ರಬಾವ ಹಾಗೂ ಭಾರಿ ಮಳೆಯಿಂದಾಗಿ ಅನೇಕ ಬೆಳೆಗಳಿಗೆ ಹಾನಿಯುಂಟಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.