ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಧಿವೇಶನದಲ್ಲಿ ವಿಪಕ್ಷಗಳ ಬಣ್ಣ ಬಯಲು ಮಾಡುವೆ: ಯಡಿಯೂರಪ್ಪ (BJP | Yeddyurappa | Land scam | Congress | JDS | Deve gowda)
Bookmark and Share Feedback Print
 
ಅಕ್ರಮ, ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಿರುವ ಪ್ರತಿಪಕ್ಷ ಮುಖಂಡರ ನಿಜ ಬಣ್ಣ ಮುಂದಿನ ಅಧಿವೇಶನದಲ್ಲಿ ಬಯಲು ಮಾಡುವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ಮಂಠಾಳದಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿದ ಅವರು, ಆಡಳಿತದಲ್ಲಿ ನ್ಯೂನ್ಯತೆಗಳಿದ್ದರೆ, ಭ್ರಷ್ಟಾಚಾರ ನಡೆದಿದ್ದರೆ ಎಲ್ಲೋ ಕುಳಿತು ಮಾಧ್ಯಮದ ಎದುರು ಮನಬಂದಂತೆ ಮಾತನಾಡಿದರೆ ಏನು ಪ್ರಯೋಜನ? ಅಧಿವೇಶನದಲ್ಲಿ ಬನ್ನಿ ಚರ್ಚಿಸೋಣ ಎಂದು ಪಂಥಾಹ್ವಾನ ನೀಡಿದರು.

ಯಡಿಯೂರಪ್ಪ ಅಂಥವರ ಕೈಗೆ ಅಧಿಕಾರ ಸಿಕ್ಕಿದ್ದು ಪುಣ್ಯವೋ, ಪಾಪವೋ ಅರ್ಥವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಇದನ್ನು ಜನರೇ ನಿರ್ಧರಿಸುತ್ತಾರೆ ಎಂದರು.

ನಾನು ನಿತ್ಯವೂ ಅಗ್ನಿಪರೀಕ್ಷೆ ಎದುರಿಸುವಂತಾಗಿದೆ. ಜನರ ಆಶೀರ್ವಾದದಿಂದ ಎಲ್ಲವನ್ನೂ ಎದುರಿಸುತ್ತಿದ್ದೇನೆ. ನನ್ನನ್ನು ಹೇಗಾದರೂ ಮಾಡಿ ಅಧಿಕಾರದಿಂದ ಇಳಿಸಲು ಅಪ್ಪ-ಮಕ್ಕಳು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಮತದಾರರು ಚುನಾವಣೆಯಲ್ಲಿ ಪಕ್ಷಕ್ಕೆ ಜಯ ಕೊಡುವ ಮೂಲಕ ಪ್ರತಿಪಕ್ಷಗಳಿಗೆ ಪಾಠ ಕಲಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಸರಕಾರ ಸಮಗ್ರ ವಿಕಾಸದ ಧ್ಯೇಯ ಹೊಂದಿದೆ. ಕಳೆದ ಎರಡೂವರೆ ವರ್ಷದಲ್ಲಿ ಮಾಡಿದ ಸಾಧನೆ ಕಾಂಗ್ರೆಸ್‌ನ 20 ವರ್ಷದ ಆಡಳಿತಕ್ಕೆ ಸಮವಾಗಿದೆ. ಜಿ.ಪಂ., ತಾಲೂಕು ಪಂಚಾಯ್ತಿಗಳನ್ನು ಮತ್ತಷ್ಟು ಬಲಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ