ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ, ಎಡಪಕ್ಷ ಸಿದ್ದಾಂತಗಳು ಏನಾದವು?: ಬರಗೂರು ರಾಮಚಂದ್ರಪ್ಪ (BJP | CPI | CPI(M) | Baraguru ramachandrappa | Globalaization)
Bookmark and Share Feedback Print
 
NRB
ಪ್ರಸಕ್ತ ರಾಜಕೀಯವು ಸೈದ್ದಾಂತಿಕ ದಿವಾಳಿಯಾಗಿದ್ದು, ನೈತಿಕತೆ ನಪುಂಸಕಗೊಂಡಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ವಿವಿಯ 19ನೇ ನುಡಿಹಬ್ಬದ ಪ್ರಯುಕ್ತ ವಿವಿಯ ಭುವನವಿಜಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಕರ್ನಾಟಕ ರಾಜಕೀಯ ಬೆಳವಣಿಗೆ ಹಾಗೂ ಸಾಮಾಜಿಕ ಪರಿಣಾಮಗಳು' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಎಡಪಕ್ಷ, ಬಿಜೆಪಿಗೆ ಸಿದ್ದಾಂತಗಳಿದ್ದವು. ಆದರೆ, ಅವು ಶುಷ್ಕಗೊಂಡಿವೆ. ಈಗಾಗಲೇ ಬಿಜೆಪಿ ಸಿದ್ದಾಂತ ಶುಷ್ಕಗೊಂಡಿರುವುದು ಕರ್ನಾಟಕದ ರಾಜಕೀಯ ಬೆಳವಣಿಗೆ ಜಗಜ್ಜಾಹೀರು ಮಾಡಿದೆ. ಸಿದ್ದಾಂತಗಳನ್ನು ಶುಷ್ಕಗೊಳಿಸದೇ, ಭಾವನಾತ್ಮಕಗೊಳಿಸಬೇಕಿತ್ತು. ಸಿದ್ದಾಂತಗಳು ಮನಸ್ಸಿಗೆ ನಾಟಬೇಕು. ಅದನ್ನು ಬಿಟ್ಟು ಮಿದುಳಿಗೆ ಸೀಮಿತಗೊಳಿಸಿದರೆ, ಜಾತಿ ಲಾಬಿ ಕೆಲಸ ಮಾಡಿಬಿಡುತ್ತದೆ. ಇದರಿಂದಾಗಿ ವಿಧಾನಸೌಧದಲ್ಲಿ ಮಠಗಳು ಹಾಗೂ ಮಠದಲ್ಲಿ ವಿಧಾನಸೌಧ ಸೇರಿಕೊಂಡಿದೆ ಎಂದರು.

70-80ರ ದಶಕದಲ್ಲಿ ಸಂಪತ್ತಿನ ಸಮಾನತೆಯ ಬಗ್ಗೆ ಕೂಗು ಎದ್ದಿತ್ತು. 90ರ ದಶಕದಲ್ಲಿ ಮುಕ್ತ ಮಾರುಕಟ್ಟೆ ಹೆಸರಿನಲ್ಲಿ ಜಾಗತೀಕರಣ ಕಾಲಿಟ್ಟಿದ್ದರಿಂದ ಸಂಪತ್ತಿನ ಸಮಾನತೆ ಮರೆಮಾಚಿತು. ಹೋರಾಟಗಳು ಕಡಿಮೆಯಾದವು. ನಾಡಿನಲ್ಲಿ ಚಿಂತನೆಯ ಬರ ಎದ್ದು ಕಂಡಿತು. ಜತೆಗೆ ಬುದ್ದಿಜೀವಿಗಳ ಹೂರಣವು ಹೊರಬಿದ್ದಿತ್ತು. ಇಂದಿಗೂ ನಾಡು ಇಲ್ಲವೇ ದೇಶವನ್ನು ಸರಿದಾರಿಗೆ ತರುವ ಚಿಂತನೆಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ