ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ವಾಮಿಗಳೆಲ್ಲ ಭೂಗಳ್ಳರು-ಭ್ರಷ್ಟರಿಗೆ ಶಿಕ್ಷೆ ಆಗ್ಬೇಕು: ಅನಂತಮೂರ್ತಿ (Anantha murthy | BJP | Yeddyurappa | Ramakrishna parama hamsa)
Bookmark and Share Feedback Print
 
NRB
ರಾಜಕಾರಣಿಗಳು ಹಣ, ಆಸ್ತಿ ಮಾಡುವುದರಲ್ಲಿ ತೊಡಗಿದ್ದರೆ, ಮಠಾಧೀಶರೂ ಕೂಡ ಭೂಗಳ್ಳರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಕಿಡಿಕಾರಿದ್ದು, ಹಿಂದೆ ಭಾರತದಲ್ಲಿ ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸರಂಥವರು ಧರ್ಮದ ಪರಂಪರೆಯನ್ನು ಹುಟ್ಟುಹಾಕಿದ್ದರು. ಆದರೆ ಇಂದು ನಮ್ಮ ಮಠಗಳ ಯಾವ ಸ್ವಾಮಿಗಳೂ ಈ ಧರ್ಮದ ಪರಂಪರೆ ಉಳಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಮಂಗಳವಾರ ಉಡುಪಿಯಲ್ಲಿ ರಥಬೀದಿ ಗೆಳೆಯರು ಮತ್ತು ಶಿವಮೊಗ್ಗದ ಅಹರ್ನಿಶಿ ಸಹಯೋಗದಲ್ಲಿ ನಡೆದ ತಮ್ಮ 80ನೇ ಹುಟ್ಟುಹಬ್ಬದ ಅಭಿನಂದನಾ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಿನ ಬಹುತೇಕ ಸ್ವಾಮಿಗಳು ಭೂಗಳ್ಳರೇ ಆಗಿದ್ದಾರೆ ಎಂದು ಆರೋಪಿಸಿದರು. ರಾಷ್ಟ್ರೀಯತೆ ಎನ್ನುವುದು ಅಪಾಯಕಾರಿ. ಇತಿಹಾಸದಲ್ಲಿ ಈ ರಾಷ್ಟ್ರೀಯತೆ ಹುಚ್ಚು ಅನೇಕ ಯುದ್ಧಗಳನ್ನು ಮಾಡಿಸಿದೆ. ಕಾಶ್ಮೀರದಲ್ಲಿಯೂ ಇದೇ ಆಗುತ್ತಿದೆ. ಅಲ್ಲಿನ ಜನರನ್ನು ಮೈಲಿಗೊಮ್ಮೆ ಐಡೆಂಟಿಡಿ ಕಾರ್ಡ್ ತೋರಿಸಿ ಅಂತ ಹೇಳಿ ಅವರ ರಾಷ್ಟ್ರೀಯತೆಯನ್ನು ಪರೀಕ್ಷೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರಲ್ಲಿ ಬೆಳೆಸಬೇಕಾದದ್ದು ದೇಶಭಕ್ತಿಯೇ ಹೊರತು ಸಂಕುಚಿತವಾದ ರಾಷ್ಟ್ರೀಯತೆ ಅಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಕಳ್ಳ ಮಂತ್ರಿಗಳನ್ನು ಜೈಲಿಗೆ ಹಾಕ್ಬೇಕು: ರಾಜ್ಯದಲ್ಲಿರುವ ಮೂವರು ಮಂತ್ರಿಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಕೋಟಿಗಟ್ಟಲೆ ಹಣ, ಆಸ್ತಿ ಮಾಡಿಕೊಂಡಿದ್ದಾರೆ. ಅವರೆಲ್ಲರಿಗೂ ಕನಿಷ್ಠ ಒಂದು ವರ್ಷವಾದರೂ ಜೈಲುಶಿಕ್ಷೆ ಆಗಲಬೇಕೆಂದು ಅನಂತಮೂರ್ತಿ ಒತ್ತಾಯಿಸಿದ್ದಾರೆ.

ಬಹುತೇಕ ಮಂದಿ ಮಂತ್ರಿಗಳು ಕೋಟಿಗಟ್ಟಲೆ ಹಣ ಗಳಿಸಿದ್ದು ಅವರಿಗೆ ಶಿಕ್ಷೆಯಾಗಲೇಬೇಕು. ಈ ರೀತಿ ಅಕ್ರಮವಾಗಿ ಹಣ, ಆಸ್ತಿ ಗಳಿಸಿರುವವರು ಯಾರು ಎಂಬುದನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ