ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪಗೆ ಮುನ್ಸಿಪಲ್ ಅಧ್ಯಕ್ಷರಾಗೋ ಯೋಗ್ಯತೆಯೂ ಇಲ್ಲ: ಸಿದ್ದು (Siddaramaiah | Yeddyurappa | Shikaripur | Congress | BJP)
Bookmark and Share Feedback Print
 
ಮುಖ್ಯಮಂತ್ರಿ ಸ್ಥಾನದ ಘನತೆ, ಗೌರವಕ್ಕೆ ಧಕ್ಕೆ ತಂದಿರುವ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ಮುನ್ಸಿಪಾಲಿಟಿ ಅಧ್ಯಕ್ಷರಾಗಲೂ ಲಾಯಕ್ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹೊಳಲ್ಕೆರೆಯಲ್ಲಿ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದರು. ಮುಖ್ಯಮಂತ್ರಿ ಸ್ಥಾನದ ಘನತೆಗೆ ಬದಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬರೀ ಸುಳ್ಳು ಹೇಳುವುದು, ಅಳುವುದೇ ಇವರ ಕೆಲಸವಾಗಿದೆ ಎಂದು ಟೀಕಿಸಿದರು.

ಪಂಚಾಯ್ತಿ ಚುನಾವಣೆ ಸರಕಾರಕ್ಕೆ ಸೆಮಿಫೈನಲ್ ಮ್ಯಾಚ್ ಇದ್ದಂತೆ. ಈ ಚುನಾವಣೆ ಮುಗಿದ ನಂತರ ವಿಧಾನಸಭೆ ಚುನಾವಣೆ ಗ್ಯಾರಂಟಿ. ಈಗ ಸದ್ಯ ಬಿಜೆಪಿ ಸರಕಾರ ಉಳಿದಿರುವುದು ಗಿಮಿಕ್‌ನಿಂದ ಮಾತ್ರ. ಇದು ಬಹಳ ದಿನ ನಡೆಯದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸುವ ಶಕ್ತಿ ಯಾವ ಪಕ್ಷಕ್ಕೂ ಇಲ್ಲ. ಪಕ್ಷದಲ್ಲಿನ ಕೆಲ ಮುಖಂಡರ ಕಾಲು ಎಳೆಯುವ ತಂತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸೋತಿದೆ ಎಂದು ಹೇಳಿದರು. ಖಜಾನೆಯಿಂದ ಪಂಚಾಯ್ತಿಗೆ ಒಂದು ರೂಪಾಯಿ ಕೊಡದ ಸಿಎಂಗೆ ವೋಟ್ ಕೇಳಲು ಯಾವ ನೈತಿಕ ಹಕ್ಕಿದೆ ಎಂದು ಸಿದ್ದು ಪ್ರಶ್ನಿಸಿದರು.
ಸಂಬಂಧಿತ ಮಾಹಿತಿ ಹುಡುಕಿ