ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಸುಂದರ ಪರಿಸರ ಮಾನವನ ಆರೋಗ್ಯಕ್ಕೆ ಅತ್ಯಗತ್ಯ ಎಂದು ರಾಜ್ಯಪಾಲ ಹನ್ಸ್ ರಾಜ್ ಭಾರದ್ವಾಜ್ ಹೇಳಿದರು.
ಅವರು ಹಲಗೂರು ಹೋಬಳಿಯ ಪ್ರಸಿದ್ಧ ಯಾತ್ರ ಸ್ಥಳ ಹಾಗೂ ಪ್ರವಾಸಿ ತಾಣ ಮುತ್ತತ್ತಿಯ ಕಾವೇರಿ ಫಿಶ್ಸಿಂಗ್ ಕ್ಯಾಂಪ್ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಗೆ ಖಾಸಗಿ ಭೇಟಿ ನೀಡಿದ್ದ ಸಂದರ್ಭ ಅವರು ಮಾತನಾಡಿದರು.
ಪುರಾತನ ಕಾಲದಿಂದಲೂ ಬಳಸಲಾಗುತ್ತಿರುವ ನಾಡದೊಣಿಯಲ್ಲಿ ಕುಳಿತು ಕುಟುಂಬ ಸಮೇತ ಜಲ ವಿಹಾರ ಮಾಡಿದರು. ಸುಂದರ ಪ್ರಕೃತಿ ಸೌಂದರ್ಯಕ್ಕೆ ಮನಸೋತು, ಪರಿಸರ ಸಂರಕ್ಷಣೆ ನಮ್ಮೆಲ್ಲಾ ಹೊಣೆಯಾಗಿದ್ದು, ಇಂತಹ ನೈಸರ್ಗಿಕ ಕೊಡುಗೆಯನ್ನು ಮುಂದಿನ ಪೀಳಿಗೆವರೆಗೆ ಕಾಪಾಡಬೇಕಾದ ಹೋಣೆ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.
ರಾಜ್ಯಪಾಲರ ಜೊತೆ ಜಿಲ್ಲಾಕಾರಿ ಡಾ. ಜಾಫರ್ , ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೌಶಲೇಂದ್ರ ಕುಮಾರ್ , ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಮೋಹನ್, ಮೆನೇಜರ್ ಪ್ರಭುದೇವ್ ಹಾಗೂ ಭೀಮೇಶ್ವರಿ ಕ್ಯಾಂಪಿನ ವ್ಯವಸ್ಥಾಪಕ ಸುಂದರ್ರಾಜ್, ಡಿವೈಎಸ್ಪಿ ಉತ್ತಪ್ಪ , ಸಿಪಿಐ ಕೃಷ್ಣಪ್ಪ , ಪಿಎಸ್ಐ ಧನರಾಜ್ ಹಾಜರಿದ್ದರು.