ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂಗೆ ತಲೆ ಸರಿಯಿಲ್ಲ, ಏನೇನೋ ಮಾತಾಡ್ತಾರೆ: ಸಿದ್ದು (BS Yeddyurappa | Sidharamaih | Congress | BJP)
Bookmark and Share Feedback Print
 
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತಿಭ್ರಮಣೆಯಾಗಿದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯ ಹೋದ ಪಕ್ಷಗಳೆಲ್ಲ ನೆಲ ಕಚ್ಚುತ್ತಿವೆ. ಪಂಚಾಯತ್ ಚುನಾವಣೆಗಳ ಬಳಿಕ ಅವರು ನಿದ್ದೆ ಮಾತ್ರೆ ತೆಗೆದುಕೊಂಡು ನಿದ್ದೆ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ ಎಂದು ಸಿಎಂ ಹೇಳಿರುವುದಕ್ಕೆ ತಿರುಗೇಟು ನೀಡಿದರು.

ಮುಖ್ಯಮಂತ್ರಿಗಳಿಗೆ ಚುನಾವಣೆಗಳಲ್ಲಿ ಸೋಲುವ ಭೀತಿಯಿದೆ. ಅದೇ ಕಾರಣದಿಂದ ಮತಿಭ್ರಮಣೆಯಾಗಿ ಬಾಯಿಗೆ ಬಂದದ್ದನ್ನೆಲ್ಲ ಮಾತನಾಡುತ್ತಿದ್ದಾರೆ ಎಂದರು.

ಅದೇ ಹೊತ್ತಿಗೆ ತಾನು ಸೊಂಟದ ಕೆಳಗಿನ ಭಾಷೆ ಬಳಸುತ್ತಿದ್ದೇನೆ ಎಂಬ ಆರೋಪಗಳನ್ನೂ ಕೂಡ ತಳ್ಳಿ ಹಾಕಿದರು. ಅದೇನಿದ್ದರೂ ಬಿಜೆಪಿಯವರದ್ದು, ನಾವು ಅಸಂಸದೀಯ ಪದಗಳನ್ನು ಬಳಕೆ ಮಾಡಿಲ್ಲ, ಮುಂದೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಬಳಸುವ ಪದಗಳು ಸರಿಯಿಲ್ಲ. ಹಾಗಾಗಿ ಅವರ ಟೀಕೆಗಳಿಗೆ ನಾನು ಪ್ರತ್ಯುತ್ತರ ನೀಡಲಾರೆ ಎಂದು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಯಡಿಯೂರಪ್ಪ ಹೇಳಿದ್ದಕ್ಕೆ ಮೇಲಿನಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ನಾನೆಂದೂ ಅಂತಹ ಪದಗಳನ್ನು ಬಳಸಿಲ್ಲ. ಕೈ ಕತ್ತರಿಸಿ, ನಾಲಿಗೆ ಸೀಳಿ ಎಂದೆಲ್ಲ ಹೇಳಿಕೆ ನೀಡುವವರು ಬಿಜೆಪಿಯರು. ನಾನು ಅಂತಹ ಸಂಸ್ಕೃತಿಯವನಲ್ಲ. ಅದು ಕಾಂಗ್ರೆಸ್ ಸಂಸ್ಕೃತಿಯೂ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಯಡಿಯೂರಪ್ಪ ಒಬ್ಬ ಹೇಡಿ ಮುಖ್ಯಮಂತ್ರಿ, ನಿರ್ಲಜ್ಜ ಮುಖ್ಯಮಂತ್ರಿ, ಲಜ್ಜೆಗೆಟ್ಟ ಮುಖ್ಯಮಂತ್ರಿ ಎಂದು ಟೀಕಿಸಿದರೆ, ಅದು ಸೊಂಟದ ಕೆಳಗಿನ ಭಾಷೆಯೇ? ಅವರ ಕಾರ್ಯವೈಖರಿಯನ್ನಷ್ಟೇ ನಾನು ಖಂಡಿಸುತ್ತಿದ್ದೇನೆ ಎಂದು ತನ್ನ ಮಾತನ್ನು ಪುನರಾವರ್ತಿಸಿದರು.
ಸಂಬಂಧಿತ ಮಾಹಿತಿ ಹುಡುಕಿ