ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೊಂದು ವಿವಾದದಲ್ಲಿ ರೆಡ್ಡಿ; 87 ಕೋಟಿ ರೂ. ತೆರಿಗೆ ವಂಚನೆ (Obulapuram Mining Company | BJP | tax evasion | I-T department)
Bookmark and Share Feedback Print
 
NRB
ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಒಬಳಾಪುರಂ ಮೈನಿಂಗ್ ಕಂಪನಿ ಸುಮಾರು 87 ಕೋಟಿ ರೂಪಾಯಿ ತೆರಿಗೆ ವಂಚಿಸಿರುವ ಅಂಶ ಇದೀಗ ಕೇಂದ್ರ ಆದಾಯ ತೆರಿಗೆ ಇಲಾಖೆ ವರದಿಯಲ್ಲಿ ಬಹಿರಂಗಗೊಳ್ಳುವ ಮೂಲಕ ರೆಡ್ಡಿ ಸಹೋದರರು ಮತ್ತು ಸಚಿವ ಬಿ.ಶ್ರೀರಾಮುಲು ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಂತಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈಗಾಗಲೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಆಂಧ್ರಪ್ರದೇಶದಲ್ಲಿ ತನಿಖೆ ನಡೆಸುತ್ತಿದೆ. ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ರಾಜ್ಯದಲ್ಲಿಯೂ ನಡೆಸುತ್ತಿದ್ದಾರೆಂಬ ಪ್ರತಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೂಡ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ವಿವರಣೆ ಕೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

87 ಕೋಟಿ ರೂ. ತೆರಿಗೆ ವಂಚನೆ?:ರೆಡ್ಡಿ ಒಡೆತನದ ಒಬಳಾಪುರಂ ಕಂಪನಿ 2007-08ನೇ ಸಾಲಿನಲ್ಲಿ ವ್ಯವಸ್ಥಿತವಾಗಿ 87 ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದನ್ನು ಆದಾಯ ತೆರಿಗೆ ಇಲಾಖೆ ತನ್ನ ಮಧ್ಯಂತರ ವರದಿಯಲ್ಲಿ ಬಹಿರಂಗಪಡಿಸಿದೆ. ಜನಾರ್ದನ ರೆಡ್ಡಿ ಹಾಗೂ ಸಚಿವ ಶ್ರೀರಾಮುಲು ಪಾಲುದಾರಿಕೆಯ ಗಣಿ ಕಂಪನಿಯು ಸಿಂಗಾಪುರ ಮೂಲದ ಜಿಎಲ್ಎಟಿಐ ಕಂಪನಿ ಜತೆ ಅದಿರು ರಫ್ತು ಒಡಂಬಡಿಕೆ ಮಾಡಿಕೊಂಡಿತ್ತು.

ಜನಾರ್ದನ ರೆಡ್ಡಿ ಪತ್ನಿ ಗಾಲಿ ಲಕ್ಷ್ಮಿ ಅರುಣಾ ರೆಡ್ಡಿ ಹೆಸರಿನಲ್ಲಿಯೇ ಜಿಎಲ್‌ಎಟಿಐ ಕಂಪನಿಯನ್ನು ಸ್ಥಾಪಿಸಲಾಗಿದೆ. ಇದಕ್ಕೆ ಜನಾರ್ದನ ರೆಡ್ಡಿಯೇ ನಿರ್ದೇಶಕ. ಈ ಕಂಪನಿ ಸಿಂಗಾಪುರ್, ದುಬೈ ಹಾಗೂ ಬ್ರಿಟನ್‌ನ ದ್ವೀಪ ಪ್ರದೇಶದಲ್ಲಿ ಶಾಖೆಗಳನ್ನು ಹೊಂದಿದೆ. ಈ ಕಂಪನಿ ಒಬಳಾಪುರಂ ಮೈನಿಂಗ್ ಕಂಪನಿಯಿಂದ ಕಡಿಮೆ ಬೆಲೆಗೆ ಅದಿರನ್ನು ಪಡೆದುಕೊಂಡು, ಜಿಎಲ್‌ಎಟಿಐ ಮೂಲಕ ಅಮೆರಿಕದ ಕಂಪನಿಗಳಿಗೆ ಹೆಚ್ಚಿನ ಬೆಲೆಗೆ ಅದಿರನ್ನು ಮಾರಾಟ ಮಾಡುತ್ತಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.

ಒಬಳಾಪುರಂ ಕಂಪನಿ ಮತ್ತು ಜಿಎಲ್ಎಟಿಐ ಕಂಪನಿ ನಡುವಿನ ಖರೀದಿ ಮತ್ತು ಮಾರಾಟ ಒಪ್ಪಂದದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಒಎಂಸಿಯಿಂದ ಕಡಿಮೆ ಬೆಲೆಗೆ ಅದಿರು ಖರೀದಿ ಮಾಡಿ ನಂತರ ಅಮೆರಿಕದ ಕಂಪನಿಗಳಿಗೆ 144ರಿಂದ 165 ಡಾಲರ್‌ಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಜನಾರ್ದನ ರೆಡ್ಡಿ ಸುಮಾರು 87 ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದಾಗಿ ಕೇಂದ್ರ ಆದಾಯ ತೆರಿಗೆ ಇಲಾಖೆ ವಿವರಿಸಿದೆ.

ಒಬಳಾಪುಂರ ಕಂಪನಿ ಅದಿರು ರಫ್ತಿಗೆ ಸಂಬಂಧಿಸಿದಂತೆ ಜಿಎಲ್‌ಎಟಿಐ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದು, ಇದು ತೆರಿಗೆ ವಂಚನೆಗಾಗಿ ಮಾಡಿಕೊಂಡಿರುವ ಯೋಜನೆಯಾಗಿದೆ ಎಂದು ವರದಿಯಲ್ಲಿ ದೂರಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ