ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆರೋಪಿ ಸೆರೆ; ಬ್ರೌನ್ ಶುಗರ್ ಸಿಗರೇಟ್ ಬೆಲೆ 500 ರೂಪಾಯಿ! (Bangalore | CCB polce | Brown sugar | Cigarette | Arrest)
Bookmark and Share Feedback Print
 
ಕಾಡುಗೊಂಡನಹಳ್ಳಿಯ ಕರುಮಾರಿಯಮ್ಮ ದೇವಾಲಯದಲ್ಲಿ ಗೋಲ್ಡ್ ಫ್ಲಾಕ್ ಕಿಂಗ್ ಸೈಜ್ ಸಿಗರೇಟ್‌ಗಳಲ್ಲಿ ಬ್ರೌನ್‌ಶುಗರ್ ತುಂಬಿ ಸಿಗರೇಟ್ ಒಂದಕ್ಕೆ 500 ರೂ.ನಂತೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆತನಿಂದ 15 ಲಕ್ಷ ರೂಪಾಯಿ ಮೌಲ್ಯದ ಬ್ರೌನ್‌ಶುಗರ್‌ನ್ನು ವಶಪಡಿಸಿಕೊಂಡಿದ್ದಾರೆ.

ಟ್ಯಾನರಿ ರಸ್ತೆಯ ಕರುಮಾರಿಯಮ್ಮ ದೇವಸ್ಥಾನ ಬೀದಿಯ ಸೈಯದ್ ಅಸ್ಗರ್ (40) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 15 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಬ್ರೌನ್‌ಶುಗರ್, 5 ಸಾವಿರ ರೂಪಾಯಿ ನಗದು, ಮೊಬೈಲ್ ಹಾಗೂ ಸ್ಕೂಟರನ್ನು ವಶಪಡಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿ ಕಳೆದ ಹತ್ತು ವರ್ಷಗಳಿಂದ ಬ್ರೌನ್‌ಶುಗರ್ ಮಾರಾಟ ದಂಧೆಯಲ್ಲಿ ತೊಡಗಿದ್ದು, ಮುಂಬೈನ ಕಾರ್‌ಬೀಚ್‌ನಲ್ಲಿ ಖಾನ್ ಎಂಬುವನಿಂದ ಬ್ರೌನ್‌ಶುಗರ್ ಖರೀದಿಸಿ ಬೆಂಗಳೂರಿಗೆ ತಂದು ಅದನ್ನು ಸಿಗರೇಟಿಗೆ ತುಂಬಿಸಿ ಐಟಿಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ