ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 2ಜಿ ಅಂದ್ರೆ ಸೋನಿಯಾ, ರಾಹುಲ್ ಗಾಂಧಿ!: ಅನಂತ್ ಕುಮಾರ್ (Ananth kumar | Rahul gandhi | Sonia gandhi | 2g scandal)
Bookmark and Share Feedback Print
 
ರಾಷ್ಟ್ರದ ಬಹುದೊಡ್ಡ ಹಗರಣವಾದ 2ಜಿ ಸ್ಪೆಕ್ಟ್ರಂನಲ್ಲಿ ಕಾಂಗ್ರೆಸ್ ಮುಖಂಡರೇ ಭಾಗಿಯಾಗಿದ್ದು, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಎಂಬ ಎರಡು 'ಜಿ'ಗಳೇ ಈ ಹಗರಣದ ಪ್ರಮುಖ ರೂವಾರಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅನಂತ್ ಕುಮಾರ್ ಟೀಕಿಸಿದ್ದಾರೆ.

ಈ ಎರಡು 'ಜಿ'ಗಳ ಕೈಗೊಂಬೆಯಂತೆ ಪ್ರಧಾನಿ ಮನಮೋಹನ್ ಸಿಂಗ್ ವರ್ತಿಸುತ್ತಿರುವುದಾಗಿ ದೂರಿದ ಅವರು, 2ಜಿ ಸ್ಪೆಕ್ಟ್ರಂ ಅನ್ನು ಕಾಯ್ದೆಗೆ ಅನುಗುಣವಾಗಿ ಹಂಚಿಲ್ಲ. ಕೇವಲ ತಮಗಿಷ್ಟವಾದ ಪ್ರಮುಖ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ಕಾರಣ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂದರು.

ಈ ಹಣದಿಂದ ದೇಶದ ಗ್ರಾಮೀಣ ಪ್ರದೇಶಕ್ಕೆ ಸರಳವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದಿತ್ತು ಎಂದು ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತ ಹೇಳಿದರು.

ದೇಶದಲ್ಲಿ ಹಲವಾರು ಭ್ರಷ್ಟಾಚಾರ ನಡೆಸಿರುವ ಕಾಂಗ್ರೆಸ್ ಜನರ ಅಭಿವೃದ್ಧಿಯತ್ತ ಗಮನಹರಿಸುವುದನ್ನು ಬಿಟ್ಟು ಕೊಳ್ಳೆ ಹೊಡೆಯುವುದರಲ್ಲಿಯೇ ನಿರತವಾಗಿದೆ. ಹಾಗಾಗಿ ಅಭಿವೃದ್ಧಿಪಥದತ್ತ ಸಾಗುತ್ತಿರುವ ಆಡಳಿತಾರೂಢ ರಾಜ್ಯ ಬಿಜೆಪಿ ಸರಕಾರ ವಿರುದ್ಧ ಕಾಂಗ್ರೆಸ್ ಇಲ್ಲ-ಸಲ್ಲದ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ