ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್, ಜೆಡಿಎಸ್‌ಗೆ ತಕ್ಕ ಪಾಠ ಕಲಿಸಿ: ಯಡಿಯೂರಪ್ಪ (Congress | JDS | Yeddyurappa | Siddaramaiah | Deve gowda)
Bookmark and Share Feedback Print
 
ಕಳೆದ ಎರಡೂವರೆ ವರ್ಷದಿಂದ ಆಡಳಿತಕ್ಕೆ ಅಡ್ಡಗಾಲು ಹಾಕುವುದರಲ್ಲೇ ಕಾಲ ಕಳೆದ ಕಾಂಗ್ರೆಸ್, ಜೆಡಿಎಸ್‌ಗೆ ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತದಾರರಿಗೆ ಕರೆ ನೀಡಿದರು.

ಹೊನ್ನಾಳಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಸಭೆ ಉದ್ಘಾಟಿಸಿ ಮಾತಾನಾಡಿದ ಅವರು, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲರನ್ನು ಗೋಳು ಹೊಯ್ದುಕೊಂಡ ರಾಜಕೀಯ ಮುಖಂಡರು ತಮ್ಮ ವಿರುದ್ಧವೂ ಷಡ್ಯಂತ್ರ ರೂಪಿಸಿದ್ದಾರೆ ಎಂದು ಪರೋಕ್ಷವಾಗಿ ಗೌಡರ ವಿರುದ್ಧ ಆರೋಪಿಸಿದರು. ದಿನಬೆಳಗಾದರೆ ಒಂದಿಲ್ಲೊಂದು ಅಪಪ್ರಚಾರ ನಡೆಸಿ ಸರಕಾರದ ಸಾಧನೆ ಮರೆಮಾಚುವ ಪ್ರಯತ್ನ ಮಾಡಿದರೂ ತಾವು ಅದಕ್ಕೆ ಜಗ್ಗುವುದಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯದ 1.80 ಕೋಟಿ ಕುಟುಂಬಗಳು ಸರಕಾರದ ಒಂದಿಲ್ಲೊಂದು ಸೌಲಭ್ಯ ಪಡೆದಿವೆ. ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಜನನಿ ಸುರಕ್ಷಾ, ಮಡಿಲು, ಸೈಕಲ್ ವಿತರಣೆ, ವಿಕಲಚೇತನರಿಗೆ, ವಿಧವೆಯರಿಗೆ ಮಾಸಾಶನ ಹೆಚ್ಚಳ, ರೈತರಿಗೆ ಕಡಿಮೆ ದರದಡಿ ಸಾಲ ನೀಡುವ ಮೂಲಕ ಜನಪರ ಆಡಳಿತ ನೀಡಲಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದಲ್ಲೂ ಕೂಡ ಪಂಚಾಯಿತಿ ಚುನಾವಣೆ ಫಲಿತಾಂಶ ಬಿಜೆಪಿ ಪರ ಬರಲಿದೆ ಎಂದು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ