ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರಧಾನಿ, ಸಿಎಂ ಜನರಿಂದಲೇ ಆಯ್ಕೆಯಾಗ್ಬೇಕು: ಬಾಬಾ ರಾಮದೇವ್ (Baba ramadev | Election | Gulbarga kampu | voters | PM | CM)
Bookmark and Share Feedback Print
 
PTI
ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿಯನ್ನು ಮತದಾರರೇ ನೇರವಾಗಿ ಆಯ್ಕೆ ಮಾಡುವ ಪದ್ಧತಿ ಜಾರಿಗೆ ಬರಬೇಕೆಂದು ಯೋಗ ಗುರು ಬಾಬಾ ರಾಮದೇವ್ ಅಭಿಪ್ರಾಯವ್ಯಕ್ತಪಡಿಸಿದ್ದು, ಅಗತ್ಯ ಬಿದ್ದರೆ ಕಾನೂನಿಗೆ ತಿದ್ದುಪಡಿ ತರಲೂ ಒತ್ತಾಯಿಸಿದ್ದಾರೆ.

ಕಲಬುರ್ಗಿ ಕಂಪು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಮತದಾರರು ಶಾಸಕರು ಮತ್ತು ಸಂಸದರನ್ನು ಆಯ್ಕೆ ಮಾಡುತ್ತಾರೆ. ಹೆಚ್ಚು ಸಂಸದರು ಹಾಗೂ ಶಾಸಕರನ್ನು ಹೊಂದಿರುವ ಪಕ್ಷದವರು ಪ್ರಧಾನಿಯೋ ಇಲ್ಲವೇ ಮುಖ್ಯಮಂತ್ರಿಯೋ ಆಗುತ್ತಾರೆ. ಅವರು ಪಕ್ಷದ ಪ್ರತಿನಿಧಿಯಾಗುತ್ತಾರೆಯೇ ಹೊರತು ಜನತೆಯ ಪ್ರತಿನಿಧಿಗಳಾಗುವುದಿಲ್ಲ ಎಂದರು. ಇದನ್ನು ತಪ್ಪಿಸಲು ನೇರ ಆಯ್ಕೆಗೆ ಅವಕಾಶ ಕೊಡುವುದು ಸೂಕ್ತ ಎಂದು ಹೇಳಿದರು.

ಭ್ರಷ್ಟಾಚಾರ ನಿರ್ಮೂಲನೆಗೆ ತಾವು ಸಿದ್ಧ. ಅದಕ್ಕಾಗಿ ತಮ್ಮದೇ ಆದ ಹೊಸ ಪಕ್ಷ ಕಟ್ಟಲೂ ಸಹ ತಾವು ಹಿಂಜರಿಯುವುದಿಲ್ಲ. ಸುಖೀ ಸಮಾಜ ನಿರ್ಮಿಸಲು ಸಿದ್ದವಾದವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದ ಬಾಬಾ, ಆದರೆ ಯಾವುದೇ ಕಾರಣಕ್ಕೂ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.

ಭ್ರಷ್ಟಾಚಾರವೆಂದರೆ ಕೇವಲ ಹಣವನ್ನಷ್ಟೇ ಲೂಟಿ ಹೊಡೆಯುವುದಲ್ಲ, ಇದರೊಡನೆ ಜನತಂತ್ರ ಹೆಸರನಲ್ಲಿ ನೈಸರ್ಗಿಕ ಸಂಪತ್ತನ್ನೂ ಸಹ ಲೂಟಿ ಹೊಡೆಯಲಾಗುತ್ತಿದೆ. ಕಲ್ಲಿದ್ದಲು, ಕಬ್ಬಿಣದ ಅದಿರು ಹೀಗೆ ಅನೇಕ ನೈಸರ್ಗಿಕ ಸಂಪತ್ತನ್ನು ದೋಚಲಾಗುತ್ತಿದೆ. ಇದರ ಬಗ್ಗೆ ಕರ್ನಾಟಕ ಸೇರಿದಂತೆ ದೇಶದ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ ಲೂಟಿಯಾದ ಹಣ ಮರಳಿ ಸರಕಾರದ ಖಜಾನೆಗೆ ತಂದು ತುಂಬುವ ಕೆಲಸ ಆಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ