ಬಿಜೆಪಿಗೆ ಶೇ.60 ರಷ್ಟು ಸ್ಥಾನಗಳು ಲಭಿಸುತ್ತದೆ: ಬಚ್ಚೇಗೌಡ
ವಿಜಯಪುರ, ಭಾನುವಾರ, 2 ಜನವರಿ 2011( 16:39 IST )
NRB
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಶೇ.60 ರಷ್ಟು ಸ್ಥಾನಗಳು ಲಭಿಸುತ್ತದೆ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದ್ದಾರೆ.
ನೂತನ ಸಂವತ್ಸರದ ಪ್ರಯುಕ್ತ ಇಲ್ಲಿನ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 18 ಜಿಲ್ಲಾ ಪಂಚಾಯಿತಿ ಸ್ಥಾನಗಳ ಪೈಕಿ ಬಿಜೆಪಿ 10 ಸ್ಥಾನಗಳನ್ನು ಪಡೆದು ಅಧಿಕಾರ ಪಡೆಯಲಿದ್ದು, ತಾಲೂಕು ಪಂಚಾಯಿತಿಗಳ ಪೈಕಿ ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ದೇವನಹಳ್ಳಿ ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಪಕ್ಷದ ಅಭಿವೃದ್ದಿಗಾಗಿ ದುಡಿಯಬೇಕು. ಸರಕಾರವು ರಾಜ್ಯದ 224 ಕ್ಷೇತ್ರಗಳ ಅಭಿವೃದ್ದಿಗೆ ಯಾವುದೆ ತಾರತಮ್ಮ ತೋರದೆ ಸಮಾನವಾಗಿ ಹಣ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ತಾಲೂಕಿನ ಜನತೆಯ ಬಹು ವರ್ಷಗಳ ಬೇಡಿಕೆಯಾಗಿರುವ ವಿಜಯಪುರ ಕೆಎಸ್ಆರ್‌ಟಿಸಿ ಡಿಪೊ ಬಗ್ಗೆ ಈಗಾಗಲೇ ಪತ್ರ ವ್ಯವಹಾರದ ಕೆಲಸ ಮುಗಿದಿದ್ದು, ಶೀಘ್ರದಲ್ಲಿಯೇ ಅದಕ್ಕೆ ಚಾಲನೆ ದೊರೆಯಲಿದೆ. ವಿಜಯಪುರ ಪಟ್ಟಣದಲ್ಲಿ ಗುಡಿಸಲು ಮುಕ್ತ ರಾಜ್ಯ ಯೋಜನೆಯಡಿ ನಿವೇಶನ ರಹಿತರು ಅರ್ಜಿ ಸಲ್ಲಿಸಿದರೆ ಅದರ ಬಗ್ಗೆ ಪರೀಶೀಲಿಸಿ ನಿವೇಶನ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.