ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ವಿಧಾನ ಮಂಡಲದ ಅಧಿವೇಶನ ಕಲಾಪಗಳ ದಿಕ್ಕು ದೆಸೆ ನಿರ್ಧಾರವಾಗಲಿದೆ.
ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಲಾಪ ನಡೆಸಲು ಅವಕಾಶ ನೀಡದಿರಲು ನಿರ್ಧರಿಸಿರುವುದರಿಂದ, ಅಡಳಿತ ಪಕ್ಷ ಬಿಜೆಪಿ ವಿರೋಧಿಗಳಿಗೆ ತಿರಗೇಟು ನೀಡಲು ನಿರ್ಧರಿಸಿದೆ.
ಭೂ ಹಗರಣಗಳ ಆರೋಪ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೆ ಕಲಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ಘೋಷಿಸಿದ್ದು, ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲಿಸುವ ಸಾಧ್ಯತೆಗಳಿವೆ.
ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಲ್ಲಿ ಮಾತ್ರ ಪ್ರತಿಪಕ್ಷಗಳನ್ನು ಎದುರಿಸಲು ಶಕ್ತಿ ಲಭಿಸಿದಂತಾಗುತ್ತದೆ. ಒಂದು ವೇಳೆ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸದಿದ್ದಲ್ಲಿ, ಬೆಜಿಪಿ ವಿರುದ್ಧ ಪ್ರತಿ ಪಕ್ಷಗಳು ರಣಕಹಳೆಯನ್ನು ಮೊಳಗಿಸುವ ಸಾಧ್ಯತೆಗಳಿವೆ.