ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೆಚ್ಚು ಹಣ ಸಂಪಾದಿಸುವುದು ಮುಖ್ಯವಲ್ಲ: ಎನ್.ಆರ್. ರಾವ್ (NR rao | Mysore | Bangalore | Manmohan singh)
Bookmark and Share Feedback Print
 
ನೂರಕ್ಕೆ ನೂರು ಅಂಕ ಪಡೆಯುವುದು, ಹೆಚ್ಚು ಹಣ ಸಂಪಾದಿಸುವುದು ಮುಖ್ಯವಲ್ಲ. ಹೊಸ ದೃಷ್ಟಿ ನಿಜವಾದ ಕ್ರಿಯಾಶೀಲತೆ ಎಂದು ಪ್ರಧಾನಿಯವರ ವೈಜ್ಞಾನಿಕ ಸಲಹಾ ಮಂಡಳಿ ಅಧ್ಯಕ್ಷ ಪ್ರೊ.ಸಿ.ಎನ್.ಆರ್.ರಾವ್ ಪ್ರತಿಪಾದಿಸಿದ್ದಾರೆ.

ನಗರದ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆ ರೂಪಿಸಿರುವ 'ಜ್ಞಾನ ಉದ್ಯಾನ' ಮತ್ತು ನಗರ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

'ಜ್ಞಾನ ಉದ್ಯಾನ'ದಲ್ಲಿ ಸುತ್ತಾಡಿ, ವಿವರಣೆ ನೀಡಲು ನಿಂತಿದ್ದ ವಿದ್ಯಾರ್ಥಿಗಳಿಗೆ, ಆಡಳಿತ ಮಂಡಳಿಯವರಿಗೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡಿದ ರಾವ್, ಸಭಾ ಕಾರ್ಯಕ್ರಮದಲ್ಲಿ ತಮ್ಮ ಮಾತನ್ನು ಕ್ರಿಯಾಶೀಲತೆ, ಗುಣಾತ್ಮಕತೆ, ಕರ್ತವ್ಯ ಬದ್ಧತೆ ಕುರಿತು ಕೇಂದ್ರೀಕರಿಸಿದರು. ಈ ಮೂರರಲ್ಲೇ ಭಾರತದ ಭವಿಷ್ಯ ಅಡಗಿದೆ ಎಂದೂ ಹೇಳಿದರು.

ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಆದರೆ, ಭಾರತೀಯರು ಬೌದ್ಧಿಕವಾಗಿ ಬಡವರು. ನೈತಿಕತೆಯೂ ಕುಸಿಯುತ್ತಿದೆ. ಬೆಂಗಳೂರಲ್ಲಿ ಸೂಟು, ಬೂಟು ಹಾಕಿಕೊಂಡು ಸೂಟ್‌ಕೇಸ್ ಹಿಡಿದು ಓಡಾಡುವರ ಸಂಖ್ಯೆ ದೊಡ್ಡದಿದೆ. ಆದರೆ, ಅವರ ತಲೆಯೊಳಗೆ ಏನೂ ಇಲ್ಲ.ಎಲ್ಲರೂ ಹಣದ ಹಿಂದೆ ಬಿದ್ದಿದ್ದಾರೆ. ಅಲ್ಲಷ್ಟೆ ಅಲ್ಲ, ಭಾರತದ ಮನಸ್ಥಿತಿಯೇ ಹಾಗಾಗಿದೆ. ಅದೇ ನಮ್ಮೆದುರಿನ ದೊಡ್ಡ ಸವಾಲು ಎಂದು ವಿಶ್ಲೇಷಿಸಿದರು.

ದೇಶದಲ್ಲಿ ವಿಜ್ಞಾನಿಗಳಿಗೇನೂ ಕೊರತೆ ಇಲ್ಲ. ಆದರೆ, ಗುಣಮಟ್ಟ, ಕರ್ತವ್ಯ ಬದ್ಧತೆ, ಕ್ರಿಯಾಶೀಲತೆ ಮತ್ತಿತರ ಎಲ್ಲಾ ವಿಷಯದಲ್ಲಿ ನಮ್ಮದು ಮಧ್ಯಮ ದರ್ಜೆ. ಇದರಿಂದ ಹೊಸದರ ಸೃಷ್ಟಿ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಚೀನಾ ಮಾದರಿ. ಶಿಕ್ಷಣ, ಕ್ರೀಡೆ, ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳ ಕುರಿತು ಆದ್ಯ ಗಮನ ಹರಿಸುತ್ತಾರೆ. ಕರ್ತವ್ಯ ಬದ್ಧತೆ, ಕ್ರಿಯಾ ಶೀಲತೆಯಿಂದಾಗಿ ಯಶಸ್ಸು ಸಾಸುತ್ತಿದ್ದಾರೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ