ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನಗೂ ಓಎಂಸಿಗೂ ನಂಟಿಲ್ಲ; ವಿಪಕ್ಷಗಳ ಹೇಳಿಕೆ ಮೂರ್ಖತನ: ರೆಡ್ಡಿ (Karunakara Reddy | Karnataka | State Politics | Mining)
Bookmark and Share Feedback Print
 
ನನಗೂ ಓಬಳಾಪುರಂ ಮೈನಿಂಗ್ ಕಂಪೆನಿಗೂ ಯಾವುದೇ ಸಂಬಂಧವಿಲ್ಲ ಎಂದು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಬಳ್ಳಾರಿಯ ಮೂವರು ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳ ಹೇಳಿಗೆ ಉದ್ಧಟತನ ಮತ್ತು ಮೂರ್ಖತನದಿಂದ ಕೂಡಿದೆ ಎಂದು ತಿರುಗೇಟು ನೀಡಿದ್ದಾರೆ.

ಸಚಿವ ಜನಾರ್ದನ ರೆಡ್ಡಿ ಮಾಲಿಕತ್ವದ ಗಣಿ ಪ್ರದೇಶಗಳ ಗುತ್ತಿಗೆ ರದ್ದತಿ ಶಿಫಾರಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಾವು ಯಾವುದೇ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಇದನ್ನು ಸರ್ವೆ ಆಫ್ ಇಂಡಿಯಾ ಸುಪ್ರೀಂ ಕೋಟ್‌ಗೆ ತಿಳಿಸಿತ್ತು. ಹೀಗಿದ್ದರೂ ಬಳ್ಳಾರಿ ಸಚಿವರ ವಿಷಯದಲ್ಲಿ ವಿಪಕ್ಷಗಳು ಮೂರ್ಖತನದಿಂದ ವರ್ತಿಸುತ್ತಿವೆ ಎಂದು ಕಿಡಿ ಕಾರಿದರು.

ಒಂದೊಂದು ಸಂಸ್ಥೆಗಳು ಒಂದೊಂದು ರೀತಿಯ ವರದಿಯನ್ನು ನೀಡುತ್ತಿದ್ದು, ಹೀಗಾಗಿ ಸುಪ್ರೀಂನಿಂದ ತೀರ್ಪು ಹೊರಬೀಳುವ ವರೆಗೂ ನಿಜಾಂಶ ತಿಳಿಯುವುದಿಲ್ಲ ಎಂದವರು ಸೇರಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ