ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನಗಳು ಸೋಮವಾರ ನಡೆಯಲಿದ್ದು, ಪ್ರತಿಪಕ್ಷಗಳಿಗೆ ಆಡಳಿತ ಸರಕಾರ ಭ್ರಷ್ಟಾಚಾರ ಹಗರಣವೇ ಪ್ರಮುಖ ಅಸ್ತ್ರವಾಗಿದೆ.
ಆದರೆ ಪ್ರತಿಪಕ್ಷಗಳನ್ನು ಸವಾಲನ್ನು ಎದುರಿಸಲು ಆಡಳಿತ ಪಕ್ಷ ಕೂಡಾ ಸಜ್ಜುಗೊಂಡಿದೆ. ಇದರಿಂದಾಗಿ ಸದನದಲ್ಲಿ ಚರ್ಚೆಗಿಂತ ಹೆಚ್ಚಾಗಿ ಆರೋಪ ಪ್ರತ್ಯಾರೋಪನೆಗಳೇ ಹೆಚ್ಚಾಗುವ ಸಾಧ್ಯತೆಯಿದೆ.
ಅಧಿವೇಶನ ಗೊಂದಲ ಕೂಡಿರಲಿದ್ದು, ಭಾರಿ ಕೋಲಾಹಲ ಸೃಷ್ಟಿಯಾಗುವ ಎಲ್ಲ ಲಕ್ಷ್ಮಣಗಳು ಗೋಚರಿಸುತ್ತಿವೆ. ಇದರಿಂದಾಗಿ ಆಡಳಿತ ಮತ್ತು ಪ್ರತಿಪಕ್ಷಗಳು ತೀವ್ರ ಮುಜುಗರಕ್ಕೀಡು ಮಾಡಲಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಸರ್ಕಾರದ ವಿರುದ್ಧ ಸದನದಲ್ಲಿ ಸಮರ ನಡೆಸಲು ಈಗಾಗಲೇ ಸಜ್ಜುಗೊಂಡಿದೆ. ಭೂ ಹಗರಣ, ಸ್ವಜನ ಪಕ್ಷಪಾತ, ಅಕ್ರಮ ಗಣಿಗಾರಿಕೆಗಳು, ಬಳ್ಳಾರಿ ಸಚಿವರ ವಜಾ ಬೇಡಿಕೆ ಇವೆಲ್ಲವೂ ಪ್ರತಿಪಕ್ಷದ ಪ್ರಮುಖ ಅಸ್ತ್ರವಾಗಿರಲಿದೆ.
ನಿಷೇಧಾಜ್ಞೆ ಜಾರಿ... ಜನವರಿ 10 ರಿಂದ 20ರ ವರೆಗೆ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕ್ರಮ ಕೈಗೊಳ್ಳಲಾಗಿದೆ. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ವವಿಧ ರಾಜಕೀಯ ಪಕ್ಷಗಳು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಭವಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಭಯೋತ್ಪಾದಕರು ಬೆಂಗಳೂರು ನಗರ ಕೇಂದ್ರಿಕರಿಸಿ ದಾಳಿ ನಡೆಸುವ ಸಾಧ್ಯತೆಯೂ ಇದೆ ಎಂಬ ಗುಪ್ತಚರ ವಿಲಾಖೆಯ ಎಚ್ಚರಿಯ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.