ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ಜತೆ ಸೇರಿ ಜಂಟಿ ಸಮರ: ಕುಮಾರಸ್ವಾಮಿ (Yadyurappa | Congress | JDS | Kumaraswamy)
Bookmark and Share Feedback Print
 
ಭ್ರಷ್ಟಾಚಾರ ಕರ್ನಾಟಕ ಸರಕಾರದ ವಿರುದ್ಧ ಹೋರಾಟ ಸಾರಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಪ್ರಮುಖ ವಿಪಕ್ಷ ಕಾಂಗ್ರೆಸ್ ಜತೆ ಸೇರಿ ಸದನದಲ್ಲಿ ಸಮರಕ್ಕೆ ಸಂಕಲ್ಪ ಮಾಡಿಕೊಂಡಿದ್ದಾರೆ.

ಅಮ್ಮಳ್ಳಿದೊಡ್ಡಿಯಲ್ಲಿ ಹೇಳಿಕೆ ನೀಡಿದ ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಸಚಿವರನ್ನು ಪದೇ ಪದೇ ಬೆಂಬಲಿಸುವ ಮೂಲಕ ಮುಖ್ಯಮಂತ್ರಿ ಯಡ್ಡಿಯೂರಪ್ಪ ಸಚಿವರುಗಳ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಕರ್ನಾಟಕದ ಗಡಿ ಭಾಗದಲ್ಲಿನ ಅಕ್ರಮ ಗಣಿಗಾರಿಕೆಗೆ ಸಿಎಂ ಸಹಕಾರ ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೂ ಬಳ್ಳಾರಿ ಸಚಿವರ ರಾಜೀನಾಮೆ ಪಡೆಯಲು ಸಿಎಂ ಧೈರ್ಯ ತೋರುತ್ತಿಲ್ಲ ಎಂದವರು ಹೇಳಿದರು.

ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಗುವಾಹಟಿನಲ್ಲಿ ಉದ್ದ ಉದ್ದ ಭಾಷಣ ಮಾಡುತ್ತಿರುವ ನಾಯಕರಿಗೆ ಕರ್ನಾಟಕದ ಭ್ರಷ್ಟಾಚಾರ ಗಮನಕ್ಕೆ ಬರುದಿಲ್ಲವೇ ಎಂದು ವ್ಯಂಗ್ಯ ಮಾಡಿದರು.

ಭ್ರಷ್ಟಾಚಾರ ಕರ್ನಾಟಕ ಸರಕಾರ ವಿರುದ್ಧ ನಾಳೆ ನಡೆಯಲಿರುವ ಕಲಾಪದಲ್ಲಿ ಕಾಂಗ್ರೆಸ್ ಜತೆ ಸೇರಿ ಹೋರಾಟ ತೀವ್ರಗೊಳಿಸಲಾಗುವುದು ಎಂದವರು ತಿಳಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ