ಪಕ್ಷದ ವರಿಷ್ಠರ ಬೆಂಬಲವಿದೆ; ಸಿಎಂ ಆಗಿ ಬಾಕಿ ಅವಧಿ ಪೂರ್ಣಗೊಳಿಸಲಿದ್ದೇನೆ. ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ಪಷ್ಟ ನುಡಿ. ಗುವಾಹಟಿನಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಯಡ್ಡಿ ಇದನ್ನು ಸ್ಪಷ್ಟಪಿಡಿಸಿದ್ದಾರೆ.
ಬಳ್ಳಾರಿ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಮೇಲಿನ ಒತ್ತಡವು ಹೆಚ್ಚುತ್ತಿದೆ. ಆದರೆ ಚಾಣಾಕ್ಷ ನಡೆಯನ್ನು ಇಟ್ಟಿರುವ ಮುಖ್ಯಮಂತ್ರಿ ರಾಷ್ಟ್ರೀಯ ನಾಯಕರ ಹೆಗೆಲಿಗೆ ಹೊಣೆ ಹೊರಿಸಿದ್ದಾರೆ.
ರೆಡ್ಡಿ ಸಹೋದರರನ್ನು ಕೈಬಿಟ್ಟರೆ ಸರಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಅವರಿಗೆ ತಿಳಿದಿದೆ. ಇದರಿಂದಾಗಿ ಅಪಾಯ ಆಹ್ವಾನಿಸಲು ಸಿದ್ದರಿಲ್ಲ. ಹೀಗಾಗಿ ವಿಪಕ್ಷಗಳ ಭಾರಿ ಒತ್ತಡವಿದ್ದರೂ ಸಚಿವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ... ಗುವಾಹಟಿನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೇದ್ರ ಸರಕಾರದ ವಿರುದ್ಧ ವಿಪಕ್ಷ ನಾಯಕ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಕೂಡಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ಕೈಬಿಡುವುದಿಲ್ಲ ಎಂಬ ಸಂಕಲ್ಪವನ್ನು ಮಾಡಿಕೊಂಡಿದ್ದಾರೆ.