ಇತ್ತೀಚೆಗಷ್ಟೇ ನಡೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ ಜೆಡಿಎಸ್ ಜತೆ ಮೈತ್ರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದೊಳಗೆಯೇ ಅಪಸ್ವರ ಕೇಳಿಬರುತ್ತಿವೆ.
ಇದನ್ನು ಬಹಿರಂಗವಾಗಿ ಹೇಳಿರುವ ಸಿದ್ದರಾಮಯ್ಯ ಕಟ್ಟಾ ಅನುಯಾಯಿ ಆಗಿರುವ ಬಿ.ಆರ್. ಪಾಟೀಲ್, ಜೆಡಿಎಸ್ ಜತೆಗಿನ ಮೈತ್ರಿ ಎಂದಿಗೂ ಬೇಡ ಎಂಬ ಬೇಡಿಕೆಯನ್ನಿರಿಸಿಕೊಂಡಿದ್ದಾರೆ.
ಇಂತಹ ಅತ್ರಂತ ಸ್ಥಿತಿ ನಿರ್ಮಾಣವಾಗಲು ಪಕ್ಷದ ಗೊಂದಲ ನಿರ್ಣಯಗಳೇ ಕಾರಣ ಎಂದಿರುವ ಅವರು ಇತ್ತೀಚೆಗಿನ ಪಂಚಾಯತಿ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದಿಂದ ಗೆಲುವಿನ ವಿಶ್ವಾಸ ಕಳೆದುಕೊಂಡಿರುವುದೇ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು.
ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದೆಂದರೆ ಅದು ಆತ್ಮಹತ್ಯೆಗೆ ಸಮ. ಜೆಡಿಎಸ್‌ನಲ್ಲಿ ಇರಲು ಸಾಧ್ಯವಾಗದ ಕಾರಣದಿಂದಲ್ಲೇ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಆ ಪಕ್ಷದಿಂದ ಹೊರಬಂದಿದ್ದಾರೆ. ಹೀಗಾಗಿ ಜೆಡಿಎಸ್ ಜತೆ ಮೈತ್ರಿ ಬೇಡ ಎಂದಿದ್ದಾರೆ.