ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಇಸಿ ವರದಿ-ಮಾಧ್ಯಮಗಳಿಗೆ ಪ್ರಾಮಾಣಿಕತೆ ಇಲ್ಲ: ರೆಡ್ಡಿ (Janardana Reddy | CEC | Veerappa moily | supreme court | OMC)
Bookmark and Share Feedback Print
 
ಇತ್ತೀಚೆಗೆ ಮಾಧ್ಯಮಗಳು ಪ್ರಾಮಾಣಿಕತೆ ಹಾಗೂ ವಸ್ತುನಿಷ್ಠ ವರದಿ ಮಾಡುವುದನ್ನು ಬಿಟ್ಟು ಕೆಲಸ ಮಾಡುತ್ತಿವೆ ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಆರೋಪಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಜರುಗಿದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಸುಪ್ರೀಂಕೋರ್ಟ್‌ಗೆ ಸಿಇಸಿ ಸಲ್ಲಿಸಿರುವ ವರದಿಯಲ್ಲಿ ಎಲ್ಲೂ ನಮ್ಮ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಎಸಗಿದೆ ಎಂದು ತಿಳಿಸಿಲ್ಲ. ಸಿಇಸಿ ಶಿಫಾರಸನ್ನು ತಪ್ಪಾಗಿ ಅರ್ಥೈಸಿ ಮಾಧ್ಯಮಗಳು ವರದಿ ಮಾಡಿವೆ. ಸಿಇಸಿ ಶಿಫಾರಸು ವರದಿ ಮಾಡುವಾಗ ಮಾಧ್ಯಮಗಳು ಪ್ರಾಮಾಣಿಕತೆ ಹಾಗೂ ನಿಯತ್ತು ಬಿಟ್ಟಿವೆ. ಇದನ್ನು ತಿಳಿಸಲು ನನಗೂ ಬೇಸರವಾಗುತ್ತಿದೆ. ಪ್ರತಿಪಕ್ಷಗಳ ಹೇಳಿಕೆಯನ್ನೇ ಮುಂದಿಟ್ಟುಕೊಂಡು ವರದಿ ಮಾಡುವ ಮುನ್ನ ಸಿಇಸಿ ವರದಿಯನ್ನು ಕೂಲಂಕಷವಾಗಿ ಓದಬೇಕಿತ್ತು ಎಂದು ಸಲಹೆ ಕೂಡ ಈ ಸಂದರ್ಭದಲ್ಲಿ ನೀಡಿದರು.

ನಮ್ಮ ಒಡೆತನದ ಮೈನಿಂಗ್ ಕಂಪನಿಗಳ ಗುತ್ತಿಗೆ ರದ್ದು ಮಾಡುವಂತೆ ಸಿಇಸಿ ವರದಿ ನೀಡಿರುವುದು ನಮ್ಮಲ್ಲಾದ ತಾಂತ್ರಿಕ ಕಾರಣಗಳೇ ಹೊರತು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ್ದಲ್ಲ. ಈ ವಿಷಯವನ್ನು ಮರೆಮಾಚಿ ಪ್ರತಿಪಕ್ಷಗಳು ಹೇಳಿದಂತೆ ಮಾಧ್ಯಮಗಳು ಸುದ್ದಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಾಧ್ಯಮಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಆದರೆ, ಸಿಇಸಿ ಶಿಫಾರಸನ್ನು ವರದಿ ಮಾಡುವಾಗ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿವೆ. ತಪ್ಪು ಹುಡುಕಿ ಬರೆಯಲು ಮಾಧ್ಯಮಗಳಿಗೆ ಸ್ವಾತಂತ್ರ್ಯವಿದೆ. ಆದರೆ, ಪ್ರತಿಪಕ್ಷಗಳು ಹೇಳಿದ ಮಾತನ್ನೇ ನಂಬಿಕೊಂಡು ನಮ್ಮ ವಿರುದ್ಧ ವರದಿ ಮಾಡಿರುವುದು ಯಾವ ನ್ಯಾಯ ? ಪ್ರಾಮಾಣಿಕರಾಗಿಯೇ ನಾವು ಬದುಕುತ್ತಿದ್ದೇವೆ ಎಂದರು.

ಕೇಂದ್ರದ ಕಾನೂನು ಸಚಿವ ವೀರಪ್ಪ ಮೊಯ್ಲಿ ಕೂಡ ಸಿಇಸಿ ವರದಿಯ ಬಗ್ಗೆ ತಪ್ಪಾಗಿ ಹೇಳಿಕೆ ನೀಡಿರುವುದು ಇಡೀ ರಾಜ್ಯದ ಜನ ತಲೆ ತಗ್ಗಿಸುವ ವಿಷಯ. ಸಿಇಸಿ ನೀಡಿರುವ ಶಿಫಾರಸು ಸಂಬಂಧ ಮಾಧ್ಯಮಗಳು ಬಹಿರಂಗ ಚರ್ಚೆಗೆ ಆಹ್ವಾನಿಸಿದರೆ ಬರಲು ಸಿದ್ಧ. ಬೇಕಾದರೆ ನೇರ ಪ್ರಸಾರ ಮಾಡಲಿ. ರಾಜ್ಯದ ಜನರ ಮುಂದೆ ಸಿಇಸಿ ವರದಿ ಏನು ಹೇಳುತ್ತದೆ ಎಂಬುದನ್ನು ತಿಳಿಸೋಣ ಎಂದರು.
ಸಂಬಂಧಿತ ಮಾಹಿತಿ ಹುಡುಕಿ