ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೋಫೋರ್ಸ್ ಹಗರಣ-ಕಾಂಗ್ರೆಸ್ ಕಮಿಷನ್ ಪಡೆದಿಲ್ಲ: ಪೂಜಾರಿ (Janardana Poojary | Rajiv gandhi | Congress | BJP)
Bookmark and Share Feedback Print
 
ಬೋಫೋರ್ಸ್ ವ್ಯವಹಾರದಲ್ಲಿ ಕಾಂಗ್ರೆಸ್ ಸರಕಾರ ಕಮಿಷನ್ ಪಡೆಯದಿದ್ದರೂ ಬಿಜೆಪಿ ನಾಯಕರು ವಿನಾಕಾರಣ ಈ ವಿಚಾರವನ್ನು ಕೆದಕುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಫೋರ್ಸ್ ವ್ಯವಹಾರದಲ್ಲಿ ಕಾಂಗ್ರೆಸ್ ಸರಕಾರ 210 ಕೋಟಿ ರೂ. ಲಂಚವಾಗಿ ಪಡೆಯಬಹುದಾಗಿದ್ದರೂ ಅಂತಹ ಕೆಲಸ ಕಾಂಗ್ರೆಸ್ ಮಾಡಿಲ್ಲ ಎಂದರು.

ಕೇಂದ್ರದಲ್ಲಿ ಜನತಾ ಸರಕಾರವಿದ್ದಾಗ 1,480 ಕೋಟಿ ರೂ.ಗಳ ಬೋಫೋರ್ಸ್ ಖರೀದಿ ಬಗ್ಗೆ ಮಾತುಕತೆ ಆರಂಭವಾಗಿತ್ತು. ಬಳಿಕ ಬಂದ ಕಾಂಗ್ರೆಸ್ ಸರಕಾರ ಬೋಫೋರ್ಸ್ ಸಂಸ್ಥೆಯ ಜತೆ ಮಾತುಕತೆ ನಡೆಸಿ ದರ ಕಡಿಮೆ ಮಾಡಲು ತಿಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಕಾಲ ಮಾತುಕತೆ ಮುಂದುವರಿದು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ವ್ಯವಹಾರ ಕುದುರಿ 210 ಕೋ.ರೂ. ಕಡಿಮೆಗೆ ಬೋಫೋರ್ಸ್ ಖರೀದಿಸಲಾಗಿತ್ತು. ಇದರಿಂದ ಕೇಂದ್ರ ಸರಕಾರಕ್ಕೆ ಲಾಭವಾಗಿದೆ. ಸರಕಾರ ಯಾರಿಗೂ ಕಮಿಷನ್ ನೀಡಿಲ್ಲ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದೆ ಎಂದರು.

ಬೋಫೋರ್ಸ್ ದಿ ಬೆಸ್ಟ್ ಗನ್ ಎಂದು ಮಿಲಿಟರಿ ಅಧಿಕಾರಿಗಳೇ ಪ್ರಶಂಸಿಸಿದ್ದಾರೆ. ಕಾರ್ಗಿಲ್ ಯುದ್ಧವನ್ನು ಬೋಫೋರ್ಸ‌ನಿಂದಲೇ ಗೆದ್ದಿದ್ದೇವೆ. ಅವ್ಯವಹಾರ ನಡೆದಿದೆ ಎಂದು ಹೇಳುವ ಆಡ್ವಾಣಿ ಬಿಜೆಪಿ ಸರಕಾರವಿದ್ದಾಗ ಯಾಕೆ ತನಿಖೆ ನಡೆಸಲಿಲ್ಲ ? ವಿದೇಶಿ ಬ್ಯಾಂಕ್‌ನಲ್ಲಿ 300 ಲಕ್ಷ ಕೋಟಿ ರೂ. ಕಪ್ಪು ಹಣವಿದೆ ಎಂದು ಆಡ್ವಾಣಿ ಹೇಳುತ್ತಿದ್ದಾರೆ. ಉಪ ಪ್ರಧಾನಿಯಾಗಿದ್ದ ಅವರು ಯಾಕೆ ಈ ಹಣ ವಾಪಸು ತರಿಸಿಲ್ಲ ? ಈ ಅಂಕಿ ಅಂಶ ಅವರಿಗೆ ನೀಡಿದವರು ಯಾರು ? ಜನತೆಯನ್ನು ಮೋಸಗೊಳಿಸಲು ಇಂತಹ ಕಾಲ್ಪನಿಕ ಅಂಕಿ ಅಂಶಗಳ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪೂಜಾರಿ ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರದ ಬಗ್ಗೆ ಆಡ್ವಾಣಿ, ಜೇಟ್ಲಿ ಭಾರಿ ಮಾತನಾಡಿದ್ದಾರೆ. ಆದರೆ ಯಡಿಯೂರಪ್ಪ ಅವರ ಹಗರಣಗಳ ಬಗ್ಗೆ ಎಲ್ಲ ಪುರಾವೆ ಇದ್ದರೂ ಮೌನ ವಹಿಸಿದ್ದಾರೆ. ಬಿಜೆಪಿ ನಾಯಕರಿಗೆ ಧೈರ್ಯ ಇದ್ದರೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಿ. ಅದು ಸಾಧ್ಯವಾಗದಿದ್ದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಸಂಬಂಧಿತ ಮಾಹಿತಿ ಹುಡುಕಿ