ಅನಿಧಿಕೃತ ಗಣಿಗಾರಿಯ ಆರೋಪ ಹೊತ್ತಿರುವ ರೆಡ್ಡಿ ಸಹೋದರರ ಒಡೆತನದ ಓಬಳಾಪುರಂ ಗಣಿ ಕಂಪೆನಿಯ ನಿವೇಶನಕ್ಕೆ ಭೇಟಿ ನೀಡಿರುವ ಸಿಬಿಐ ತಂಡ ತನಿಖೆ ಆರಂಭಿಸಿದೆ.
ರೆಡ್ಡಿ ಸಚಿವ ಸಹೋದರರ ಸಚಿತ ಆರು ಕಂಪೆನಿಗಳು ಅಕ್ರಮ ಗಣಿಗಾರಿಕೆ ನಡೆಸಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗಿದೆ.
ಸಮಗ್ರ ಪರಿಶೀಲನೆ ನಡೆಸಿದ ಸಿಬಿಐ ತಂಡ ಗಣಿ ಸಂಸ್ಥೆಗಳ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಣಿ, ಭೂ ವಿಜ್ಞಾನ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಈ ತಂಡಕ್ಕೆ ಸಹಕಾರವನ್ನು ನೀಡಿತ್ತು.
ಸಿಬಿಐ ಡಿಐಜಿ ಡಿ.ವಿ. ಲಕ್ಷ್ಮೀನಾರಾಯಣ ನೇತೃತ್ವದ ತಂಡ ತನಿಖೆ ಕೈಗೊಂಡಿದ್ದು, ಓಬಳಾಪುರಂ ಸಹಿತ ಅನಂತಪುರ ಮೈನಿಂಗ್ ಕಂಪೆನಿಯಲ್ಲೂ ತಪಾಸಣೆ ನಡೆಸುವ ನಿರೀಕ್ಷೆಯಿದೆ.