ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮದುವೆಗೆ ನಕಾರ;ಪ್ರಿಯಕರನಿಂದ ಸೆಕ್ಸ್ ಎಂಎಂಎಸ್ ಬಯಲು! (MMS scandals | north Karnataka | Karnataka University | over leaks sex MMS)
ನಟಿ ರಂಜಿತಾ-ನಿತ್ಯಾನಂದ ಸ್ವಾಮಿ ರಾಸಲೀಲೆ ಯೂ ಟೂಬ್‌ನಲ್ಲಿ ದಾಖಲೆ ನಿರ್ಮಿಸಿದ್ದರೆ, ಮತ್ತೊಂದೆಡೆ ಎಂಎಂಎಸ್ ಸ್ಕ್ಯಾಂಡಲ್‌ಗಳು ಸದ್ದೇ ಮಾಡುತ್ತಿಲ್ಲವಲ್ಲ ಅಂತ ನೀವು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು! ಯುವತಿಯೊಬ್ಬಳು ತನ್ನನ್ನು ಮದುವೆಯಾಗಲು ನಿರಾಕಸಿದ್ದಕ್ಕೆ ಪ್ರತೀಕಾರ ಎಂಬಂತೆ ಪ್ರಿಯಕರನೊಬ್ಬ ರಾಸಲೀಲೆ ವೀಡಿಯೋ ಕ್ಲಿಪ್ ಅನ್ನು ಎಂಎಂಎಸ್ ಮೂಲಕ ಬಟಾಬಯಲು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಮುಂಗಾರು ಮಳೆ, ಮೈಸೂರು ಮಲ್ಲಿಗೆ ಅಡ್ಡ ಹೆಸರಿನ ಸೆಕ್ಸ್ ಸಿಡಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದವು. ಇದೀಗ ಹೊಸ ಎಂಎಂಎಸ್ ಕ್ಲಿಪ್ಲಿಂಗ್ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದೆಯಂತೆ.
ಧಾರವಾಡದ ಮಾಜಿ ಬ್ಯೂಟಿ ಕ್ವೀನ್, ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧಾ ವಿಜೇತೆಯಾಗಿರುವ ಯುವತಿ ಈ ವೀಡಿಯೋದ ಕೇಂದ್ರ ಬಿಂದುವಾಗಿದ್ದಾಳೆ. ಈ ಯುವತಿ ಕರ್ನಾಟಕ ಯೂನಿರ್ವಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಪರಿಚಿತನಾದವನೇ ಅಶ್ವತ್ಥ. ಈತ ಅದಾಗಲೇ ಮದುವೆ ಕೂಡ ಆಗಿದ್ದ. ಆದರೆ ಯುವತಿಗೆ ಈತ ಮದುವೆಯಾಗಿರುವ ವಿಷಯ ಆಗ ತಿಳಿದಿರಲಿಲ್ಲವಾಗಿತ್ತು ಎಂಬುದು ಸ್ಥಳೀಯರ ವಿವರಣೆ. ಹೀಗೆ ಇಬ್ಬರು ರಾಜ್ಯದ ಹಲವು ಕಡೆ ಸುತ್ತಾಡಿದ್ದರು.
ಧಾರವಾಡದಲ್ಲಿ ವಿದ್ಯಾಭ್ಯಾಸ ಮುಗಿದ ನಂತರ ಆಕೆ ಕಾರವಾರಕ್ಕೆ ವಾಪಸಾಗಿದ್ದಳು. ಬಳಿಕ ಅಶ್ವತ್ಥ ಜತೆಗಿನ ಎಲ್ಲಾ ಸಂಪರ್ಕವನ್ನು ಕಡಿದುಕೊಂಡಿದ್ದಳು. ಮೊಬೈಲ್ ನಂಬರ್ ಅನ್ನು ಕೂಡ ಬದಲಾಯಿಸಿದ್ದಳು. ಆದರೂ ಛಲ ಬಿಡದ ವಿಕ್ರಮನಂತೆ ಅಶ್ವತ್ಥ ಆಕೆಯನ್ನು ಪತ್ತೆ ಹಚ್ಚಲು ಸಾಕಷ್ಟು ಹರಸಾಹಸ ಪಟ್ಟಿದ್ದ. ಅಂತೂ ಕೊನೆಗೂ ಫೆಬ್ರುವರಿ ತಿಂಗಳಲ್ಲಿ ಅವಳ ಹೊಸ ಮೊಬೈಲ್ ನಂಬರ್ ಪತ್ತೆ ಹಚ್ಚಿ ಬಿಟ್ಟಿದ್ದ. ಆಗ ಅಶ್ವತ್ಥ ಮದುವೆಯಾಗುವಂತೆ ಮೊಬೈಲ್ ಕರೆ ಮಾಡಿ ಒತ್ತಾಯ ಹೇರಿದ್ದ. ಆದರೆ ಯುವತಿ ಮದುವೆಯಾಗಲು ನಿರಾಕರಿಸಿದ್ದಳು. ಆ ಹೊತ್ತಿಗೆ ಆತ ಮದುವೆಯಾಗಿರುವ ವಿಷಯ ಆಕೆಗೆ ತಿಳಿದು ಹೋಗಿತ್ತು.
ಆಗ ಅಶ್ವತ್ಥಗೆ ಹೊಳೆದ ವಿಚಾರವೇ ಬ್ಲ್ಯಾಕ್‌ಮೇಲ್. ಆತ ಕೆಲವು ಫೋಟೋ ಮತ್ತು ವೀಡಿಯೋಗಳನ್ನು ಆಕೆಗೆ ಇ-ಮೇಲ್ ಮಾಡಿ, ನೀನು ನನ್ನ ಜತೆಗಿನ ಸಂಪರ್ಕ ಮುಂದುವರಿಸದಿದ್ದರೆ, ಈ ರಾಸಲೀಲೆ ವೀಡಿಯೋವನ್ನು ಯೂ ಟ್ಯೂಬ್‌ಗೆ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ!
ಗಾಬರಿ ಬಿದ್ದ ಯುವತಿ ತನ್ನ ಪೋಷಕರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿ, ಕಾರವಾರ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಆತನ ಬೆದರಿಕೆ ಬಗ್ಗೆ ಮಾಹಿತಿ ನೀಡಿದ್ದಳು. ಆಗ ಎಸ್ಪಿ ಅಶ್ವತ್ಥಗೆ ಆ ರೀತಿ ಮಾಡಿದರೆ ಹುಷಾರ್ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು.
ಆದರೆ ಎಸ್ಪಿಯ ಬೆದರಿಕೆಗೆ ಸೊಪ್ಪು ಹಾಕದ ಅಶ್ವತ್ಥ ಯುವತಿ ಮದುವೆಯಾಗಲು ನಿರಾಕರಿಸಿರುವ ಸಿಟ್ಟಿಗೆ 2010 ಡಿಸೆಂಬರ್ 28ರಂದು ವೀಡಿಯೋ ಕ್ಲಿಪ್ ಅನ್ನು ಯೂ ಟ್ಯೂಪ್‌ಗೆ ಅಪ್ ಲೋಡ್ ಮಾಡಿದ್ದ. ನಂತರ ಉಳಿದ ಕ್ಲಿಪ್ಲಿಂಗ್ಸ್‌ಗಳನ್ನು ತನ್ನ ಸ್ನೇಹಿತರಿಗೆ ಎಂಎಂಎಸ್ ಮೂಲಕ ಕಳುಹಿಸಿದ್ದ. ಇದೀಗ ತಲೆಮರೆಸಿಕೊಂಡಿರುವ ಅಶ್ವತ್ಥಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.